ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನ ನಿಲ್ದಾಣದ ಉದ್ಘಾಟನಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಲೋಹದ ಹಕ್ಕಿಗಳ ಕುರಿತು ಮಲೆನಾಡಿಗರ ಕಾತುರತೆ ಹೆಚ್ಚಾಗುತ್ತಿದೆ.
ಇದರ ಬೆನ್ನಲ್ಲೇ ಯಾವ ಕಂಪೆನಿಯ ವಿಮಾನಗಳು ಶಿವಮೊಗ್ಗದಲ್ಲಿ ಹಾರಾಟ ನಡೆಬಹುದು ಎಂಬ ಪ್ರಶ್ನೆಗೆ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರು ಸುಳಿವು ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇಂಡಿಗೋ ಹಾಗೂ ಸ್ಟಾರ್ ಏರ್’ಲೈನ್ಸ್ ವಿಮಾನ ಕಂಪೆನಿಗಳ ಜೊತೆಯಲ್ಲಿ ಇಂದು ಬೆಂಗಳೂರಿನಲ್ಲಿ ಮಾತುಕತೆ ನಡೆಯುತ್ತಿದೆ. ಈ ಕಂಪೆನಿಗಳು ಸಮ್ಮತಿ ಸೂಚಿಸುತ್ತವೆ ಎಂಬ ಭರವಸೆಯಿದೆ ಎಂದಿದ್ದಾರೆ.
Also read: ವಿಐಎಸ್’ಎಲ್ ಉಳಿಸುವ ಕುರಿತು ದೆಹಲಿಯಿಂದ ಮರಳಿದ ಎಂಪಿ ರಾಘವೇಂದ್ರ ಮಹತ್ವದ ಹೇಳಿಕೆ!
ಬಹಳಷ್ಟು ಕಡೆಗಳಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಕಾರ್ಯಚಟುವಟಿಕೆ ನಡೆಸದೇ ಹಾಗೆಯೇ ಮ್ಯೂಸಿಯಂ ರೀತಿಯಲ್ಲಿ ಉಳಿದುಹೋದ ಉದಾಹರಣೆಗಳಿವೆ. ಶಿವಮೊಗ್ಗದಲ್ಲಿ ಹಾಗೆ ಆಗಬಾರದು ಎಂಬ ಉದ್ದೇಶದಿಂದ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ, ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಎಲ್ಲ ರೀತಿಯ ಮಾತುಕತೆಗಳನ್ನು ನಡೆಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post