ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೆಪ್ಟೆಂಬರ್ 9 ರಿಂದ 11 ರವರೆಗೆ ಮಹಾರಾಷ್ಟ್ರದ ಕೊಲ್ಲಾಪುರದ ಸಂಜಯ್ ಗೋದಾವತ್ ಶಾಲೆಯಲ್ಲಿ ನಡೆದ ಸಿಬಿಎಸ್ಇ ಸೌತ್ ಜೋನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ #CBSE South Zone Boxing Tournament ಶಿವಮೊಗ್ಗ ಜಿಲ್ಲೆಯ ಜೈನ್ ಪಬ್ಲಿಕ್ ಶಾಲೆಯ #Jain Public School 10ನೇ ತರಗತಿ ವಿದ್ಯಾರ್ಥಿನಿ ಮದಿಹ ಇಬ್ರಾಹಿಂ 17 ವರ್ಷ – ವಯೋಮಿತಿಯೊಳಗಿನ ಈ ಬಾಲಕಿರ 54-57 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಸಿಬಿಎಸ್ ಇ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಿಂದ ಕ್ರೀಡಾಪಟುಗಳು ಸ್ಪರ್ಧಿಸಿದ್ದು, ಮೊದಲ ಪ್ರಯತ್ನದಲ್ಲಿ ತೃತೀಯ ಬಹುಮಾನ ಪಡೆಯುವ ಮುಖಾಂತರ ಇತಿಹಾಸ ಸೃಷ್ಟಿಸಿದ್ದಾರೆ. ವಿಜೇತ ಕ್ರೀಡಾಪಟು ಈ ಹಿಂದೆ ಕರ್ನಾಟಕ ಸರ್ಕಾರದ ಮಿನಿ ಒಲಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು, ಕರಾಟೆ ಸ್ಮಾಯ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಲುವಾಗಿ ಜಿಲ್ಲಾಡಳಿತಯಿಂದ ಗೌರವ ಸನ್ಮಾನವನ್ನು ಸಹ ಈ ಹಿಂದೆ ಸ್ವೀಕರಿಸಿದ್ದಾರೆ.
Also read: ವನ್ಯ ಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯ
ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಬಾಕ್ಸಿಂಗ್ ಕೋಚ್ ಮೀನಾಕ್ಷಿ ರವರ ಬಳಿ ತರಬೇತಿ ಪಡೆಯುತ್ತಿದ್ದು ವಿಜೇತ ಕ್ರೀಡಾಪಟುವಿಗೆ ಹಾಗೂ ಕ್ರೀಡಪಟುವಿನೊಂದಿಗೆ ಕೊಲ್ಲಾಪುರ ದಲ್ಲಿ ಕೋಚ್ ಮತ್ತು ಮ್ಯಾನೇಜರ್ ಆಗಿರುವ ಭಾಗವಹಿಸಿದ್ದ ಮೊಹಮ್ಮದ್ ಯುನಸ್ ಮತ್ತು ರೇಷ್ಠಾರವರಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಶಿವಮೊಗ್ಗ ವಿನೋದ್ ಪಂದ್ಯಾವಳಿಯ ಬಾಕ್ಸಿಂಗ್ ವಿಜೇತ ಕ್ರೀಡಾಪಟು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post