ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೆರೆ ಅಭಿವೃದ್ಧಿಗಳ ಮೂಲಕ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಪಂಚಾಯತ್ ಗ್ರಾಮೀಣಾಭಿವೃದ್ಧಿ ಹಾಗೂ ಉಸ್ತುವಾರಿ ಸಚಿವ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.10 ರಂದು ನನ್ನ ಹುಟ್ಟುಹಬ್ಬವಿದ್ದು, ಕೆರೆ ಅಭಿವೃದ್ಧಿ ಆಸಕ್ತರ ಸಂಘದ ವತಿಯಿಂದ ಈಗಾಗಲೇ ನಗರದ ಹಲವು ಕೆರೆಗಳ ಅಭಿವೃದ್ಧಿ ಆಗುತ್ತಿದೆ. ನಾನು ಒಂದು ಕೆರೆಯನ್ನ ಅಭಿವೃದ್ಧಿ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

ನನ್ನ ಜನ್ಮದಿನದ ಪ್ರಯುಕ್ತ ಸಾಗರ ರಸ್ತೆಯ ಎಡಭಾಗದಲ್ಲಿರುವ ವಾಜಪೇಯಿ ಲೇಔಟ್ ಬಳಿಯ ಕೆರೆಯನ್ನು ಸ್ವಂತ ಹಣದಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ನಗರದಲ್ಲಿ 2.56ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಪರಿಸರಾಸಕ್ತ ಸಂಘದ ಸಂಯುಕ್ತಾಶ್ರಯದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.

ನಗರದ ಆಶ್ರಯ ಯೋಜನೆ ಅಡಿ 2ಜಿ ಮಾದರಿಯಲ್ಲಿ ಗೋವಿಂದಾಪುರದಲ್ಲಿ 3000 ಮನೆಗಳು ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1836 ಮನೆಗಳ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 29991 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಗೋಪಿಶೆಟ್ಟಿ ಕೊಪ್ಪದಲ್ಲಿ ಕರೆದಿರುವ 1836 ಫಲಾನುಭವಿಗಳು ಹಣಕಟ್ಟಲು ಕೊನೆ ಅವಕಾಶ ನೀಡಲಾಗಿದೆ ಎಂದರು.

1836 2ಜಿ ಮಾದರಿ ಮನೆಯ ಫಲಾನುಭವಿಗಳಿಗೆ 2021 ಜು. 21ರ ಒಳಗೆ ಹಣ ಕಟ್ಟಬೇಕು. ಒಂದು ವೇಳೆ ಇವರು ಹಣ ಕಟ್ಟಲು ವಿಫಲವಾದರೆ ಜುಲೈ ತಿಂಗಳಿಂದ ಸೆಪ್ಟಂಬರ್ ವರೆಗೆ ಆನ್ ಲೈನ್ ಅರ್ಜಿ ಕರೆಯಲಾಗುವುದು. ಜನರಲ್ 80, ಪರಿಶಿಷ್ಟ ಜಾತಿ ಮತ್ತು ಪಂಗಡದ 50 ಫಲಾನುಭವಿಗಳು ಹಣ ಕಟ್ಟಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















