ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿಯವರ #PM Narendra Modi ನೇತೃತ್ವದ 3ನೇ ಅವಧಿಯ ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಕಲ್ಪ ಬಜೆಟ್ ಮಂಡಿಸಿದ್ದು, ಇದು ಸುಭದ್ರಾ, ಸ್ಪಷ್ಟ ಕಲ್ಪನೆಯ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕರಾದ ಎಸ್. ದತ್ತಾತ್ರಿ #S Dattatri ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಮೊದಲೇ ಬಿಜೆಪಿ ಸಂಕಲ್ಪಪತ್ರ ಬಿಡುಗಡೆ ಮಾಡಿತ್ತು. ವಿಕಸಿತ ಭಾರತ-ಅಭಿವೃದ್ಧಿ ಹೊಂದಿದ ದೇಶ ಮಾಡುತ್ತೇವೆ ಎನ್ನಲಾಗಿತ್ತು. ಸಂಕಲ್ಪ ಪತ್ರದಲ್ಲಿ ಪ್ರಸ್ತಾವಿಸಿದ ಶೇ.60ರಷ್ಟನ್ನು ಮೊನ್ನೆಯ ಬಜೆಟ್‌ನಲ್ಲಿ ಅಳವಡಿಸಲಾಗಿದೆ ಎಂದರು.
ನವಪಥಗಳ ಮೂಲಕ ವಿಕಸಿತ ಭಾರತ ತರುವಂತಹ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತಹ ಬಜೆಟ್ ಇದಾಗಿದ್ದು, ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಕಲ್ಪ ಬಜೆಟ್ ಇದಾಗಿದೆ ಎಂದರು.
Also read: ಭಾರೀ ಮಳೆ | ನೀರಿನ ಹರಿವು ಹೆಚ್ಚಳ | ಹೇಮಾವತಿ ನದಿಪಾತ್ರದ ಜನರು ಮುಂಜಾಗ್ರತೆ ವಹಿಸಲು ಸೂಚನೆ
ರಾಜ್ಯಕ್ಕೂ ಕೂಡ ಬಜೆಟ್‌ನಲ್ಲಿ 72 ಹೊಸ ಯೋಜನೆಗಳ ಲಾಭ ಸಿಗಲಿದೆ. ಆದರೆ ಸಂಪೂರ್ಣವಾಗಿ ಬಜೆಟ್‌ನ್ನು ಅಧ್ಯಯನ ಮಾಡದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರೋಪ ಹೊರುಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ವಿಳಂಬಕ್ಕೆ ಕೂಡ ಇಲ್ಲಿನ ಅಧಿಕಾರಿಗಳು ಸರಿಯಾದ ತಾಂತ್ರಿಕ ಪ್ರಸ್ತಾವನೆ ಮಾಡದೇ ಇರುವುದು ಎಂದರು.
9 ವಿಷಯಗಳ ಆಧಾರದ ಮೇಲೆ ಈ ಬಜೆಟ್ ಮಂಡಿಸಿದ್ದು, ಕೃಷಿಗೆ ಮೊದಲ ಆದ್ಯತೆ ನೀಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಕೃಷಿ ಸಂಶೋಧನಾ ಡಿಜಿಟಲ್ ತಂತ್ರಜ್ಞಾನ ಆಧಾರಿತ ಯೋಜನೆಗಳಿಗೆ 1.28ಲಕ್ಷ ಕೋಟಿಯನ್ನು ಮೀಸಲಿಡಲಾಗಿದೆ ಎಂದರು.
1 ಕೋಟಿ ಉದ್ಯೋಗ ಸೃಷ್ಟಿಸಲು ಇಂಟರ್ನ್ಶಿಫ್ ಯೋಜನೆಯಡಿ ಉದ್ಯೋಗದಾತರ ಸಹಭಾಗಿತ್ವದಲ್ಲಿ 500 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಂದು ತಿಂಗಳ ಪಿಎಫ್‌ನ್ನು ಸರ್ಕಾರವೇ ಭರಿಸುತ್ತದೆ. ಮುದ್ರಾಯೋಜನೆಯಡಿ ಯಾವುದೇ ಜಾಮೀನಿಲ್ಲದೆ 200 ಲಕ್ಷ ಹಣ ಕೊಡಲಿದ್ದು, ಕೌಶಲ್ಯಾಭಿವೃದ್ಧಿಗೂ ಕೂಡ ಸಬ್ಸಿಡಿ ನೀಡಲಾಗಿದೆ ಎಂದರು.
ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕಾಗಿ 12.50ಲಕ್ಷ ಕೋಟಿ ಮೀಸಲಿಡಲಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದ್ದು, ಪ್ರಕೃತಿ ವಿಕೋಪ ಸಂಭವಿಸುವ ಪೂರ್ವಾಚಲ ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ನೀಡಲಾಗಿದೆ ಎಂದರು.
ಉತ್ಪಾದನೆ ಮತ್ತು ಸೇವೆಗಳ ಯೋಜನೆಯಡಿ ಸುಮಾರು 1,42,650 ಸ್ಟಾರ್ಟ್ಅಪ್‌ಗಳಿಗೆ ಏಜೆಂಟ್ ತೆರಿಗೆಯನ್ನು ರದ್ದು ಮಾಡಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ, ಹೊಸ ತೆರಿಗೆ ನೀತಿ, ಆದಾಯ ತೆರಿಗೆಯಲ್ಲಿ ಗರಿಷ್ಟ ೩೦%ಗೆ ಕೊನೆಯಾಗಿರುವುದು ಸ್ಟ್ಯಾಂಡರ್ಡ್ ಡಿಡಕ್ಷಣ್, ಕ್ಯಾನ್ಸರ್ ಡ್ರಗ್ಸ್ಗಳಿಗೆ ಬೆಲೆ ಕಡಿಮೆ ಮಾಡಿರುವುದು, ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ 3 ಲಕ್ಷಕೋಟಿ ಮೀಸಲಿಟ್ಟಿರುವುದು ಹಾಗೂ 3 ಕೋಟಿ ಜಾಮೀನು ರಹಿತ ಸಾಲದ ಯೋಜನೆ , ಪಿ.ಎಂ. ವಿಶ್ವಕರ್ಮ ಯೋಜನೆ, ಗ್ರಾಮೀಣಾಭಿವೃದ್ಧಿಗೆ 2.5ಲಕ್ಷ ಕೋಟಿ ಮೀಸಲು ಹಾಗೂ ಮುಂದಿನ ಪೀಳಿಗೆಗೆ ಸುಧಾರಣೆ ಯೋಜನೆಯಡಿಯಲ್ಲಿ ಯುವಕರಿಗೆ 10 ಲಕ್ಷದವರೆಗೆ ಜಾಮೀನು ರಹಿತ ಶಿಕ್ಷಣ ಸಾಲಕ್ಕಾಗಿ 1.455 ಲಕ್ಷ ಕೋಟಿ ಮೀಸಲಿಟ್ಟಿರುವುದು ಬಜೆಟ್‌ನ ಮುಖ್ಯಾಂಶವಾಗಿದ್ದು, ವಿಕಸಿತ ಭಾರತಕ್ಕೆ ಕೊಡುಗೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರದ ಭವಾನಿರಾವ್ ಮೋರೆ, ಋಷಿಕೇಶ್ ಪೈ, ಭರತ್ ಶೇಖರ್, ರಮೇಶ್ ಗೌಡ, ಚಂದ್ರಶೇಖರ್, ಅಣ್ಣಪ್ಪ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post