ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ #Nirmala Sitaraman ಮಂಡಿಸಿರುವ ಬಜೆಟ್ ಎಂಎಸ್‍ಎಂಇ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಹೇಳಿದ್ದಾರೆ.
ದೇಶದಲ್ಲಿ ಇರುವ ಒಂದು ಕೋಟಿಗೂ ಅಧಿಕ ಎಂಎಸ್‍ಎಂಇ ಒಳಗೊಂಡು ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ನಿರ್ಮಿಸಲು ಮುಂದಾಗುತ್ತಿರುವುದು ಅಭಿನಂದನೀಯ. ಎಂಎಸ್‍ಎಂಇ ಕ್ಷೇತ್ರದ ಉದ್ಯಮಕ್ಕೆ 5 ಕೋಟಿ ರೂ.ನಿಂದ 10 ಕೋಟಿ ರೂ. ಸಾಲಸೌಲಭ್ಯ ಮೊತ್ತ ಹೆಚ್ಚಿಸಿರುವುದು ಸಹಕಾರಿಯಾಗಲಿದೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ 20 ಕೋಟಿ ರೂ.ವರೆಗೆ ಸಾಲಸೌಲಭ್ಯ ನೀಡುವ ನಿರ್ಧಾರ ಸ್ವಾಗತಾರ್ಹ. ಐದು ಲಕ್ಷ ರೂ.ವರೆಗೆ ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತಿರುವುದು ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Also read: ಮಧ್ಯಮವರ್ಗ, ಕೃಷಿ, ನವೋದ್ಯಮ & ಯುವಕರಿಗೆ ಪೂರಕ ಬಜೆಟ್ | ಹೇಗೆ? ವಿಶ್ಲೇಷಣೆ ಓದಿ
ಉಡಾನ್ ಸ್ಕೀಂ ಯೋಜನೆ #Udan Scheme Plan ವಿಸ್ತಾರಗೊಳಿಸುತ್ತಿರುವುದು 4 ಕೋಟಿಗೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಐಐಟಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದು, ಆಹಾರ ಕ್ಷೇತ್ರಕ್ಕೆ ಪೆÇ್ರೀತ್ಸಾಹ ನೀಡುತ್ತಿರುವುದು, ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಘಟಕ ಆರಂಭಿಸಲು ಮುಂದಾಗುತ್ತಿರುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ ಹೆಚ್ಚಿಸುತ್ತಿರುವುದು, ಚರ್ಮೋದ್ಯಮ ಪೆÇ್ರೀತ್ಸಾಹಕ್ಕೆ ಫೆÇೀಕಸ್ ಪ್ರಾಡಕ್ಟ್ ಸ್ಕೀಂ, ಪಿಪಿಪಿ ಸ್ಕೀಂಗೆ ಉತ್ತೇಜನ, ಮುದ್ರಾ ಲೋನ್‍ನಿಂದ ಅನೇಕ ಪ್ರಯೋಜನ, ಜೀವ ಉಳಿಸಬಲ್ಲ 36 ಔಷಧಗಳಿಗೆ ತೆರಿಗೆ ಆಮದು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post