ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧ್ಯಮ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಭಾರಿ ಪ್ರಮಾಣದ ಅನುಕೂಲತೆಯನ್ನು ವಿತ್ತ ಸಚಿವರು ಅನುವು ಮಾಡಿಕೊಡುವ ಮುಖಾಂತರ ಮಧ್ಯಮ ವರ್ಗ ದೇಶದ ಬಲವರ್ಧನೆಗೆ ಬೆನ್ನೆಲುಬು ಎಂದು ವ್ಯಾಖ್ಯಾನಿಸಿದ ಮುಂಗಡಪತ್ರ ಇದಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಹಾಗೂ ಉಳಿತಾಯಕ್ಕೆ ಹೆಚ್ಚು ಒತ್ತು ಕೊಡುವ ಘನ ಉದ್ದೇಶದಿಂದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ #Nirmala Sitaraman 2025-26ನೇ ಸಾಲಿನ ಕೇಂದ್ರ ಮುಂಗಡ ಪತ್ರವನ್ನು #Union Budget 2025-26 ಮಂಡಿಸಿದ್ದು, ಈ ಬಜೆಟ್ ಗ್ರಾಮೀಣ ಭಾಗವನ್ನು ಒಳಗೊಂಡಂತೆ, ನಗರ ಕಾರ್ಮಿಕ, ನಿರುದ್ಯೋಗಿ ಯುವಕರನ್ನು ಉದ್ಯೋಗಕ್ಕೆ ಅನುವು ಮಾಡಿಕೊಡಲು ಹಾಗೂ ಗ್ರಾಮೀಣ ಮತ್ತು ನಗರ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ, ಆರೋಗ್ಯ ಸುಧಾರಣೆಯ ಕಾರ್ಯಕ್ರಮಗಳನ್ನು ಅನೇಕ ವಿಧದಲ್ಲಿರುವ ಜನಕಲ್ಯಾಣ ಹಾಗೂ ಜನಸ್ನೇಹಿ ಮುಂಗಡ ಪತ್ರವಾಗಿದೆ. ಮಧ್ಯಮ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಭಾರಿ ಪ್ರಮಾಣದ ಅನುಕೂಲತೆಯನ್ನು ವಿತ್ತ ಸಚಿವೆಯರು ಅನುವು ಮಾಡಿಕೊಡುವ ಮುಖಾಂತರ ಮಧ್ಯಮ ವರ್ಗ ದೇಶದ ಬಲವರ್ಧನೆಗೆ ಬೆನ್ನೆಲುಬು ಎಂದು ವ್ಯಾಖ್ಯಾನಿಸಿದ್ದಾರೆ.

Also read: ಬೀದಿ ಬದಿ ವ್ಯಾಪಾರಿ, ಹೋಂಸ್ಟೇಗಳಿಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ಸೆಂಟ್ರಲ್ ಬಜೆಟ್
ನಗರ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಮುಂಗಡಪತ್ರ ಒಳಗೊಂಡಿದೆ, ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಜನತೆಗೆ ನಳಗಳ ಮೂಲಕ ನೀರಿನ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು 100 ಶೇ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡುವ ಮೂಲಕ ಅದಕ್ಕೆ ಬೇಕಾಗುವಂತಹ ಹಣಕಾಸು ನೆರವನ್ನು ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ.

ವಿಮಾಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು 100 ಶೇ ಹೆಚ್ಚಿಸುವ ಮೂಲಕ ವಿಮಾ ಕ್ಷೇತ್ರವನ್ನು ಜನಸ್ನೇಹಿ ಮಾಡುವ ಭರವಸೆಯನ್ನು ನೀಡಿ, ಜಾಗತಿಕ ಮಟ್ಟದಲ್ಲಿ ಭಾರತದ ವಿಮಾ ಉದ್ಯಮವನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಕ್ಯಾನ್ಸರ್ ಔಷಧಿ ಹಾಗೂ ವಿವಿಧ ಗಂಭೀರ ಕಾಯಿಲೆಗಳ ಔಷಧೀಯ ಮೇಲಿನ ಆಮದು ಸುಂಕವನ್ನು ಪೂರ್ಣ ಪ್ರಮಾಣದಲ್ಲಿ ರದ್ದು ಮಾಡುವ ಮೂಲಕ ಹೊಸ ಭರವಸೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಮೂಡಿಸಿ ಜನರಿಗೆ ಉಪಯುಕ್ತವಾಗುವಂತೆ ಮಾಡಿದ್ದಾರೆ.
ದೇಶಿಯ ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿರುವ ವಿತ್ತ ಸಚಿವೆಯರು ದೇಶಿಯ ಉತ್ಪಾದನೆಗೆ ಬೇಕಾಗುವ ಎಲ್ಲಾ ನೆರವನ್ನು ನೀಡುವ ಭರವಸೆ ನೀಡಿದ್ದಾರೆ.

ಸೂಕ್ಷ್ಮವಾಗಿ ಈ ಮುಂಗಡಪತ್ರವನ್ನು ಗಮನಿಸಿದಾಗ ಎಲ್ಲ ವರ್ಗದ ಜನರನ್ನ ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಹಾಗೂ ಉಳಿತಾಯಕ್ಕೆ ಹೆಚ್ಚು ಒತ್ತು ಕೊಡುವ ಘನ ಉದ್ದೇಶದಿಂದ ವಿತ್ತ ಸಚಿವೆಯರು ಸಾಧ್ಯವಾದ ಎಲ್ಲ ರೀತಿಯ ನೆರವನ್ನು ವಿದ್ಯಾರ್ಥಿಗಳಿಗೆ,ಉದ್ಯಮ, ಕ್ಷೇತ್ರ ಕೃಷಿ ಕ್ಷೇತ್ರ,ಹಣಕಾಸಿನ ಕ್ಷೇತ್ರಕ್ಕೆ ಒತ್ತು ಕೊಡುವ ಮೂಲಕ ಹೊಸ ಭರವಸೆಯನ್ನ ಎಲ್ಲ ವರ್ಗದ ಜನರಲ್ಲಿ ಮೂಡಿಸಿದ್ದಾರೆ. ಇದು ಸಂಪೂರ್ಣವಾಗಿ ಜನಪರ ಮುಂಗಡಪತ್ರ ಎಂದು ಹೇಳಲು ಯಾವ ಸಂಶಯವೂ ಕೂಡ ಇರುವುದಿಲ್ಲ. ಸಾಧ್ಯವಾದ ಎಲ್ಲಾ ರೀತಿಯ ನೆರವನ್ನು ವಿದ್ಯಾರ್ಥಿಗಳಿಗೆ, ಉದ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ಹಣಕಾಸಿನ ಕ್ಷೇತ್ರಕ್ಕೆ ಒತ್ತು ಕೊಡುವ ಮೂಲಕ ಹೊಸ ಭರವಸೆಯನ್ನು ಎಲ್ಲಾ ವರ್ಗದ ಜನರಲ್ಲಿ ಮೂಡಿಸಿರುವ ಮುಂಗಡ ಪತ್ರ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post