ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆ #CET Exam ನಡೆಸುತ್ತಿದ್ದು ನಿನ್ನೆ ನಗರದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಹಿಂದೂ ಸಾಂಕೇತಿಕ ವಸ್ತುಗಳನ್ನು ತೆಗೆಸಿರುವ ಕ್ರಮವನ್ನು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಈ. ಕಾಂತೇಶ್ ಖಂಡಿಸಿದ್ದಾರೆ.
ಹಿಂದೂ ಧಾರ್ಮಿಕ ಸಂಕೇತಗಳನ್ನು ತೆಗೆಸುವುದು ಸರಿಯಲ್ಲ. ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಜನಿವಾರ, ಲಿಂಗಧಾರಣೆ, ಕೈಗೆ ಕಟ್ಟಿರುವ ದಾರಗಳನ್ನು ತೆಗೆಸುತ್ತಿರುವುದು ಖಂಡನೀಯ.
ಪ್ರಾಧಿಕಾರ ನಿಷೇದಿಸಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆಸುವುದರ ಹೊರತಾಗಿ ಹಿಂದೂ ಸಂಕೇತಗಳನ್ಮು ತೆಗೆಸುವುದು ಮುಂದುವರೆದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















