ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿರಿಯ ಸಾಹಿತಿ, ಹೋರಾಟಗಾರ ಪ್ರೊ.ಚಂದ್ರಶೇಖರ ಪಾಟೀಲ್ ನಿಧನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕನ್ನಡ ನಾಡು ನುಡಿಯ ಬಗ್ಗೆ ಒಬ್ಬ ಜನಪ್ರಿಯ ಸಾಹಿತಿಯಾಗಿ ಚಂಪಾ ಮಾಡಿದ್ದ ಸೇವೆ ಅನನ್ಯವಾಗಿದೆ. ಸಾಹಿತ್ಯಿಕ ಚಳವಳಿಯ ಪರಪಂಪರೆಯನ್ನೆ ಹುಟ್ಟು ಹಾಕಿದ್ದ ಚಂಪಾ ಅವರು ನಾಡಿನ ಎಲ್ಲ ಸಮಸ್ಯೆಗಳಿಗೆ ಪ್ರತಿಸ್ಪಮನದಿಸುತ್ತಿದ್ದರು. ಮಲೆನಾಡಿನ, ಸಾಹಿತ್ಯ ಮತ್ತು ಪಾರಿಸಾರಿಕ ಹೋರಾಟಗಳಿಗೆ ಬಲ ನೀಡಿದ್ದ ಚಿಂತಕ ಚಂಪಾ ಅಗಲಿಕೆ ನಾಡಿಗೆ ದೊಡ್ಡ ನಷ್ಟ ಎಂದು ಟ್ರಸ್ಟ್ ಆಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಉಪಾಧ್ಯಕ್ಷ ಚಂದ್ರಹಾಸ್, ಖಜಾಂಚಿ ಜೇಸುದಾಸ್, ಸಹರ್ಯದರ್ಶಿ ಗಿರೀಶ್ ಉಮ್ರಾಯ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಚಂಪಾ ಹೋರಾಟವನ್ನು ಸ್ಮರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post