ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯಿಂದಲೇ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಆರೋಪದಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಶರತ್ ಕಲ್ಯಾಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಠಾಣೆಯ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಶರತ್ ಕಲ್ಯಾಣಿಯನ್ನು ಬಿಜಾಪುರದಲ್ಲಿ ಬಂಧಿಸಿದೆ ಎಂದು ವರದಿಯಾಗಿದೆ.
Also read: ಚಲಿಸುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡು ಸುಟ್ಟ ಕರಕಲಾದ ಸಾರಿಗೆ ಬಸ್ | ಘಟನೆ ನಡೆದಿದ್ದೆಲ್ಲಿ?
ಜು.26 ರಂದು ಮಹಿಳೆಯೊಬ್ಬರು ಶರತ್ ಕಲ್ಯಾಣಿಯ ವಿರುದ್ಧ ವಂಚನೆ ಪ್ರಕರಣವನ್ನ ದಾಖಲಿಸಿದ್ದರು. ದೂರು ದಾಖಲಾದ ವೇಳೆ ಶರತ್ ಕಲ್ಯಾಣಿ ತಲೆ ಮರೆಸಿಕೊಂಡಿದ್ದನು. ಆದರೆ, ಕಾರ್ಯಾಚರಣೆ ನಡೆಸಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ನನ್ನಿಂದಲೇ ಹಣ ಪಡೆದ ಶರತ್ ಕಲ್ಯಾಣಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಶರತ್ ವಿರುದ್ಧ ಕಲಂ 376(2) ಎನ್, 420,354,323, 506 ಐಪಿಸಿ ಸೆಕ್ಷನ್ ಅಡಿ ದೂರು ದಾಖಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















