ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆಗಂಗೂರಿನಲ್ಲಿರುವ ಮಾನಸ ಇಂಟರ್‌ನ್ಯಾಷನಲ್ ಐಸಿಎಸ್‍ಇ ಶಾಲೆ ವತಿಯಿಂದ ಡಿ.1ರ ಬೆಳಿಗ್ಗೆ 10ಕ್ಕೆ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಕೆ.ವಿ.ಸೌಮ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರುವ ಉದ್ದೇಶದಿಂದ ಪ್ರತಿವರ್ಷವೂ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ಸ್ಪರ್ಧೆಗೆ ಎಲ್‍ಕೆಜಿಯಿಂದ 10ನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, 7 ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಎಲ್‍ಕೆಜಿ, ಯುಕೆಜಿ, 1 ಮತ್ತು 2ನೇ ತರಗತಿ ಮಕ್ಕಳಿಗೆ ನೀಡಲಾಗಿರುವ ಚಿತ್ರಕ್ಕೆ ಬಣ್ಣ ತುಂಬುವುದು. 3ರಿಂದ 4ನೇ ತರಗತಿಯವರೆಗೆ ಪರಿಸರ ಮಾಲಿನ್ಯ, 5 ಮತ್ತು 6ನೇ ತರಗತಿವರೆಗೆ ಸ್ವಚ್ಛಭಾರತ್, 7 ಮತ್ತು 8ನೇ ತರಗತಿಗೆ ವನ್ಯಜೀವಿಗಳ ರಕ್ಷಣೆ, 9 ಮತ್ತು 10ನೇ ತರಗತಿ ಮಕ್ಕಳಿಗೆ ಪ್ರಕೃತಿ ವಿಕೋಪಗಳು ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. ಡ್ರಾಯಿಂಗ್ ಶೀಟ್ ಮಾತ್ರ ನೀಡುವುದು, ಉಳಿದ ಪರಿಕರಗಳನ್ನು ಸ್ಪರ್ಧಿಗಳಿಗೆ ತರತಕ್ಕದ್ದು, ಮಧ್ಯಾಹ್ನ 1ಕ್ಕೆ ಬಹುಮಾನ ವಿತರಿಸಲಾಗುವುದು ಎಂದರು.
ಪ್ರತಿ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಶಿವಮೊಗ್ಗದ ವಿನೋಬನಗರದಿಂದ, ಆಲ್ಕೋಳದಿಂದ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಿಂದ ಶಾಲಾ ವಾಹನದ ಸೌಲಭ್ಯವಿದೆ ಎಂದರು.
ಪ್ರವೇಶ ಶುಲ್ಕ 50 ರೂ. ಇದ್ದು, ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9353143033, 9481265405 ಅಥವಾ 9448976887ರಲ್ಲಿ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ತಾರಾ, ಸಂದೀಪ್, ಅರುಣಾ ಕೆ.ವಿ., ಅಂಥೋನಿ ಜಿಪ್ಸನ್‍ದೀಪ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post