ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಶಿವಮೊಗ್ಗ ವಾಲಿಬಾಲ್ ಸಂಸ್ಥೆ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಿಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ತಂಡ ಚಾಂಪಿಯನ್ ಶಿಪ್ ಪಡೆದಿದ್ದು, ʼಚುಂಚಾದ್ರಿ ಕಪ್ʼ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳಾದ ಸುರುಚಿ.ಎಸ್.ಆಚಾರ್ (ಬೆಸ್ಟ್ ಬ್ಲಾಕರ್), ಪ್ರತಿಕ್ಷ ಆಗ್ನಿಸ್ (ಬೆಸ್ಟ್ ಡಿಫೆನ್ಸ್‌ರ್), ಅದಿಯ ಸಾಯಿ ಶೆಟ್ಟಿ, ವೈಷ್ಣಿಖ.ಎಸ್.ಎಂ, ಜಾನವಿ.ಎನ್.ಕೆ, ಶ್ರದ್ಧಾ.ಎಂ, ಸುನಿಧಿ.ಎಸ್.ಆಚಾರ್, ತಪಸ್ಯಾ.ವಿ, ಸಾನಿಧ್ಯ, ಸಾನ್ವಿ, ಭಾರ್ಗವಿ, ತನುಶ್ರೀ ತಂಡವು ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲೆ ನವೀನಾ ಎಂ ಪಾಯ್ಸ್, ಉಪಪ್ರಾಂಶುಪಾಲ ರಂಗನಾಥ .ಎಸ್.ಡಿ ಹಾಗು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post