ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈಯಕ್ತಿಕ ಕಾರಣಕ್ಕಾಗಿ ಯುವಕರ ನಡುವೆ ಗಲಾಟೆ ನಡೆದು ಮೂವರು ಚಾಕು ಇರಿತಕ್ಕೆ ಒಳಗಾದ ಘಟನೆ ನಿನ್ನೆ ರಾತ್ರಿ ಟಿಪ್ಪುನಗರದ ಬಳಿ ನಡೆದಿದೆ.
ಟಿಪ್ಪು ನಗರದ ಸಮೀರ್, ಫರಾಜ್, ಜೆ.ಪಿ. ನಗರ ಮಹ್ಮದ್ ಖಾಲಿದ್ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಯುವಕರು ಕಳೆದ 15 ದಿನದ ಹಿಂದೆ ಗಲಾಟೆ ಕೂಡ ಮಾಡಿಕೊಂಡಿದ್ದರು. ವೈಯಕ್ತಿಕ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ. ಫರಾಜ್ ಹಾಗೂ ಸಮೀರ್ ಎಂಬುವರು ರೌಡಿ ಶೀಟರ್‌ಗಳಾಗಿದ್ದಾರೆ ಎಂದು ತಿಳಿದುಬಂದಿದೆ.

Also read: ದಾರ್ಶನಿಕರಂತಿದ್ದ ಶ್ರೀನಿವಾಸ್ ಅವರನ್ನು ವೀರಪ್ಪನ್ ಮೋಸದಿಂದ ಕೊಂದಿದ್ದು ಹೇಗೆ? ಅವರ ಸ್ಮಾರಕ ಎಲ್ಲಿದೆ?
ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news