ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಜಾನೆ ಆರು ಗಂಟೆ ಸುಮಾರಿಗೆ 50ಕ್ಕೂ ಹೆಚ್ಚು ಮಂದಿಯ ತಂಡವೊಂದು ನಗರದ ಚಾಲುಕ್ಯ ನಗರಕ್ಕೆ ಅಂಟಿಕೊಂಡಿರುವ ಕೆರೆಯ ಅಂಚಿನ ವಾಕಿಂಗ್‌ಪಾತ್ ಹಾಗು ಅಕ್ಕ ಪಕ್ಕ ಬೆಳೆದಿದ್ದ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಿದರು.
ಶಿವಮೊಗ್ಗ ಪರೋಪಕಾರಂ, ಸರ್ಜಿ ಫೌಂಡೇಶನ್‌ನ ಸದಸ್ಯರು ಹಾಗೂ ಕಮಲಾ ನೆಹರೂ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆಯೇ ಕೈಯಲ್ಲಿ ಗುದ್ದಲಿ, ಕೈ ಬಾಚಿ, ಕುಡುಗೋಲು, ಸಲಿಕೆಗಳನ್ನು ಹಿಡಿದು ಆಳ್ತತೆರಕ್ಕೆ ಬೆಳೆದಿದ್ದ ಗಿಡ, ಗಂಟೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು. ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಕಾಡಿನಂತಾಗಿದ್ದ ವಾಕಿಂಗ್ ಪಾತ್‌ನ್ನು ಶ್ರಮಾಧಾನದ ಮೂಲಕ ಸ್ವಚ್ಛಗೊಳಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಶನ್ ಮತ್ತು ಶಿವಮೊಗ್ಗ ಪರೋಪಕಾರಂನ ಸದಸ್ಯರಾದ ಪರೋಪಕಾರಂ ಶ್ರೀಧರ್, ಶ್ರೀಕಾಂತ್ ಹೊಳ್ಳ, ತ್ಯಾಗರಾಜ್ ಮಿತ್ಯಾಂತ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಪಾಲೊಂಡಿದ್ದರು.
Also read: ಪ್ರತಿಭೆ ಅನಾವರಣಗೊಳಿಸುವುದೇ ಯುವಜನೋತ್ಸವದ ಉದ್ದೇಶ: ಶಾಸಕ ಈಶ್ವರಪ್ಪ
ಸ್ವಚ್ಛತಾ ಕಾರ್ಯಕ್ರಮ ಬಳಿಕ ಮಾತನಾಡಿದ ಸರ್ಜಿ ಫೌಂಡೇಶನ್ನಿನ ಡಾ. ಧನಂಜಯ ಸರ್ಜಿ, ನಮಗೆ ಶುದ್ಧ, ಗಾಳಿ, ನೀರು ಬೇಂಕೆಂದರೆ ಪರಿಸರವನ್ನು ರಕ್ಷಣೆ ಮಾಡುವ ನಿರಂತರ ನಡೆಯಬೇಕು. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಂತಹ ಪರಿಸರ ಪೂರಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು. ಅಲ್ಲದೇ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಪರೋಪಕಾರಂ ನೇತೃತ್ವದಲ್ಲಿ ಇವತ್ತು 625 ನೇ ಕಾರ್ಯಕ್ರಮ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















