ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಗ್ಗಾನ್ ಆಸ್ಪತ್ರೆಯ ಬಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು ಮಾಡಿದ್ದು, ಅನಧಿಕೃತ ತಿಂಡಿ ಗಾಡಿಗಳನ್ನು ತೆರವುಗೊಳಿಸಲಾಗಿದೆ.
ಪೊಲೀಸ್ ಇಲಾಖೆಯ ಸಹಕಾರಗೊಂದಿಗೆ ಮಹಾನಗರ ಪಾಲಿಕೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ್ದು, ಮೆಗ್ಗಾನ್ ಆಸ್ಪತ್ರೆಯ ಮುಂದೆ ಅನಧಿಕೃತ ಗಾಡಿಗಳನ್ನು ನಿಲ್ಲಿಸಿ ವ್ಯವಹಾರ ಮಾಡದೆ ನಿಷ್ಕ್ರಿಯವಾಗಿದ್ದ ತಿಂಡಿ ಗಾಡಿಗಳನ್ನು ವಶಕ್ಕೆ ಪಡೆದಿದೆ.
ಬೀದಿಬದಿ ವ್ಯಾಪಾರ ಕಾಡು ಹೊಂದಿದ್ದು ವ್ಯವಹಾರ ಮಾಡದೆ ಫುಟ್ಪಾತ್’ನಲ್ಲಿ ಗಾಡಿಗಳನ್ನು ನಿಲ್ಲಿಸಿದ ಬಗ್ಗೆ ಅವರಿಗೆ ತೆರವಿಗೆ ನೋಟಿಸ್ ನೀಡಲಾಗಿತ್ತು. ಆದರೂ ಸ್ಪಂದಿಸದೆ ಇರುವ ವ್ಯಕ್ತಿಗಳ ಗಾಡಿಗಳನ್ನು ಪಾಲಿಕೆ ಇಂದು ತೆರೆವುಗೊಳಿಸಿದೆ.
ಇಲ್ಲಿನ ಬೀದಿ ಬದಿಯಲ್ಲಿ ನಿಷ್ಕ್ರಿಯಗೊಂಡಿರುವ ತಿಂಡಿಗಾಡಿಗಳು, ಕಬ್ಬಿನ ಹಾಲಿನ ಮಳಿಗೆ, ಇತರೆ ಬಳಕೆ ಮಾಡದೆ ಬೀದಿ ಬದಿಯಲ್ಲೇ ಬಿಟ್ಟು ಹೋಗಿರುವ ಬಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ತಿಂಗಳುಗಳ ಹಿಂದೆ ಡಿಜಿಟಲ್ ಮಾಧ್ಯಮಗಳ ಪ್ರಕಟಣೆಯನ್ನೂ ಹೊರಡಿಸಿತ್ತು. ತಳ್ಳುವ ಗಾಡಿಗಳನ್ನು ಫುಟ್ಪಾತ್ ಮೇಲೆ ಬಿಡದೆ ವ್ಯವಹಾರ ಮುಗಿಸಿ ಗಾಡಿಗಳನ್ನು ತೆಗೆದುಕೊಂಡು ಹೋಗುವಂತೆಯೂ ಸಹ ಸೂಚಿಸಲಾಗಿತ್ತು.
ಆದರೆ, ಇಲ್ಲಿನ ವ್ಯಾಪಾರಿಗಳು ನೋಟೀಸ್’ಗೆ ಯಾವುದೇ ರೀತಿಯಲ್ಲೂ ಸಹ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿದ ಪಾಲಿಕೆ ಅನಧಿಕೃತ ಗಾಡಿಗಳನ್ನು ತೆರವುಗೊಳಿಸಿ, ವಶಕ್ಕೆ ಪಡೆಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















