ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದ್ದು, ಜಿಲ್ಲೆಯ ಕೆ.ಎಸ್. ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಅವರು ಸಚಿವರಾಗುವುದು ಬಹುತೇಕ ನಿಶ್ಚಿತವಾಗಿದೆ. ಈ ಕುರಿತಂತೆ ಮುಖ್ಯಮಂತ್ರಿಗಳು ಇಬ್ಬರು ಶಾಸಕರಿಗೆ ಖುದ್ದು ಕರೆ ಮಾಡಿ, ಸಚಿವರಾಗುವಂತೆ ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
11:30ರ ವೇಳೆಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದ್ದು, ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗುತ್ತಿರುವುದು ಮಲೆನಾಡಿಗರನ್ನು ಸಂತೋಷಗೊಳಿಸಿದೆ. ಹಿಂದೆ ಬಿಜೆಪಿ ಜೆಡಿಎಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಈಶ್ವರಪ್ಪ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು.
ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಅಂದಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪರಿಷತ್, ವಿರೋಧ ಪಕ್ಷದ ಪ್ರತಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಕೇಂದ್ರ ಸಿಲ್ಕ್ ಬೋರ್ಡ್ ಅಧ್ಯಕ್ಷರಾಗಿ , ಯುವಜನ ಹಾಗೂ ಕ್ರೀಡಾ ಸಚಿವರಾಗಿ ನಂತರ ಐದನೆಯ ಬಾರಿ ಸಚಿವರಾಗಿ, ಗ್ರಾಮೀಣಾಭಿವೃಧ್ಧಿ ಪಂಚಾಯತ್ ರಾಜ್ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಸುರ್ಧೀರ್ಘ 45 ವರ್ಷಗಳ ಕಾಲ ತಾಲೂಕಿನಾದ್ಯಂತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಾ ತಮ್ಮನ್ನು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಶಾಸಕ ಆರಗ ಜ್ಞಾನೇಂದ್ರರು ಜಾತ್ಯಾತೀತ ನೆಲೆಗಟ್ಟಿನ ತೀರ್ಥಹಳ್ಳಿಯಲ್ಲಿ ಬಿಜೆಪಿ ನೆಲೆಯೂರಲು ಭದ್ರ ಬುನಾದಿ ಕಲ್ಪಿಸಿಕೊಟ್ಟಿದ್ದಾರೆ.
ಸತತ 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 4 ಬಾರಿ ಶಾಸಕರಾಗಿರುವ ಆರಗ ಜ್ಞಾನೇಂದ್ರರವರು ಓರ್ವ ಹಿರಿಯ ಮುತ್ಸದ್ಧಿ ರಾಜಕಾರಣಿ. ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ತಾಲೂಕಿನಲ್ಲಿ ತಮ್ಮದೇ ಕಾರ್ಯಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವುದರಲ್ಲಿ ಸಿದ್ದ ಹಸ್ತರು.
ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ,ಪಕ್ಷ ಬಲವರ್ಧನೆಗೆ ಕಾರಣರಾಗಿರುವ ಸನ್ಮಾನ್ಯ ಶಾಸಕ ಆರಗ ಜ್ಞಾನೇಂದ್ರರು ಅಧಿಕಾರಕ್ಕೋಸ್ಕರ ಎಂದೂ ಲಾಭಿ ಮಾಡದೇ ಹೋದರೂ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಜ್ಞಾನೇಂದ್ರರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರಕುತ್ತದೆಂಬ ಅಭಿಲಾಷೆಯಾಗಿತ್ತು.
ಆದರೆ ಕಳೆದ ಬಾರಿಯೂ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ಲಭಿಸದೇ ಕಾರ್ಯಕರ್ತರಲ್ಲಿ ನಿರಾಸೆ ಮನೆ ಮಾಡಿತ್ತು.ಇದೀಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸನ್ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ತಾಲೂಕಿನ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ನೂರ್ಮಡಿ ಬಲ ಬಂದಂತಾಗಿದೆ.
ಜ್ಞಾನೇಂದ್ರ ನಡೆದು ಬಂದ ಹಾದಿ….
ತಮ್ಮ ರಾಜಕೀಯ ಜೀವನವನ್ನು ಪ್ರಥಮವಾಗಿ ತಾಲೂಕು ಬೋರ್ಡ್ ಚುನಾವಣೆ ಮೂಲಕ ಆರಂಭಿಸಿದ ಜ್ಞಾನೇಂದ್ರ 1983 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.
1985,1989, ರಲ್ಲಿ ಮತ್ತೆ ಸ್ಪರ್ಧೆ ಮಾಡಿದರೂ ಗೆಲುವು ದೊರಕಲಿಲ್ಲವಾದರೂ ಎಂದಿಗೂ ಅಧಿಕಾರಕ್ಕಾಗಿ ಪಕ್ಷ ತೊರೆದವರಲ್ಲ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರ ಜವಾಬ್ದಾರಿ ತಮ್ಮ ಹೆಗಲಿಗೆ ಬಿದ್ದಾಗಲೂ ಸಮರ್ಥವಾಗಿ ಎದುರಿಸಿದ ಆರಗ ಜ್ಞಾನೇಂದ್ರ ಅವರು ಪರಿಷತ್ ಚುನಾವಣೆಗೆ ಸ್ಪರ್ದಿಸಿ ಗೆಲವು ಸಾಧಿಸಿದರು.
ಆನಂತರ ಸತತ ಮೂರು ಭಾರಿ ಗೆಲುವು ಸಾಧಿಸಿದ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾಲರು ಎನ್ನುವ ದಾಖಲೆ ಹ್ಯಾಟ್ರಿಕ್ ಹೀರೋ ಎನ್ನಿಸಿಕೊಂಡವರು
ಆದರೂ 2008, 2013 ರಲ್ಲಿ ಮತ್ತೆ ಗೆಲುವು ಜ್ಞಾನೇಂದ್ರರಿಂದ ದೂರವೇ ಉಳಿಯಿತು. ಆದರೆ 2018 ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲೇ ದಾಖಲೆಯೆನ್ನುವಂತೆ 22,000 ಅಂತರ ದ ಗೆಲುವು ಸಾಧಿಸಿ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದವರು.ಇದೀಗ ಸಚೀವರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post