ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ದೇಶಭಕ್ತಿ ಯನ್ನು ಬೆಳೆಸಿಕೊಳ್ಳಬೇಕು ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಸೇವಾ ಮನೋಭಾವನೆಯನ್ನು ಹಾಗೂ ಮಾನವೀಯತೆಯನ್ನು ನೈತಿಕತೆಯನ್ನು ಬೆಳೆಸುತ್ತವೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2025-26 ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಮೂಲಕ ಒಂದೇ ಮಾತರಂ ಎಂಬ ಗೀತೆ ಸಾರವನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು. ಸರ್ಕಾರಿ ಮಹಿಳಾ ಕಾಲೇಜು ನಗರದ ಪ್ರತಿಷ್ಠಿತ ಕಾಲೇಜ್ ಆಗಬೇಕು ಒಂದು ವರ್ಷದೊಳಗೆ ಈ ಕಾಲೇಜಿಗೆ ಕಟ್ಟಡ ಶಂಕು ಸ್ಥಾಪನೆಯ ಮಾಡುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ವಿಜ್ಞಾನ ಕಾಲೇಜು ಉಪನ್ಯಾಸಕ ಸತೀಶ್ ಮಾತನಾಡಿ, ನಾವೆಲ್ಲರೂ ದೇವರ ಕೃಪೆಯಿಂದ ಬಂದವರು. ನಮ್ಮ ಹುಟ್ಟು ಆಕಸ್ಮಿಕ. ನಾವು ಸ್ಪರ್ಧೆಯಿಂದ ಭೂಮಿಗೆ ಬಂದಿದ್ದೇವೆ. ನಾವು ಜೀವನದಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಸಾಂಸ್ಕೃತಿಕ ಸಂಚಾಲಕ ಡಾ. ಜಗದೀಶ್ ಬಿದರಕೊಪ್ಪ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಭರವಸೆಯನ್ನು ಮೂಡಿಸುತ್ತೇವೆ. ಜೀವನದಲ್ಲಿ ಶಕ್ತಿ ತುಂಬುತ್ತವೆ ಎಂದರು.
ಪ್ರಾಂಶುಪಾಲರಾದ ಡಾ. ರಂಗನಾಥ್ ಕರಾಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಾಲಿಕಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ್ವರಪ್ಪ ವಿದ್ಯಾರ್ಥಿಗಳಿಗೆ ಹೆಚ್ಚು ನುಡಿಯನ್ನು ನುಡಿದರು. ಸ್ವಾಗತ ಭಾಷಣವನ್ನು ಡಾ. ವರದರಾಜ್ ನೆರವೇರಿಸಿದರು. ಸಮಾರಂಭದಲ್ಲಿ ಪ್ರಾಧ್ಯಾಪಕರುಗಳಾದ ಡಾ ನವೀನ್, ಡಾ. ಬಸವಣ್ಣಪ್ಪ, ಮಹೇಂದ್ರ, ಡಾ. ಉಮಾಪತಿ, ಡಾ. ಶಶಿಧರ್ ಮುಂತಾದವರ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























