ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹಕಾರ ಸಂಘಗಳು ಕೇವಲ ಲಾಭಾಂಶದ ಕಡೆಗೆ ಗಮನ ನೀಡದೇ ಸಾಮಾಜಿಕ ಜವಾಬ್ದಾರಿಯನ್ನು ಹೊರುವುದು ಸರ್ಕಾರಿ ಶಾಲೆಗಳ ದೃಷ್ಟಿಯಿಂದ ಇಂದು ಅನಿವಾರ್ಯವಾಗಿದೆ, ಈ ನಿಟ್ಟಿನಲ್ಲಿ ದುರ್ಗಿಗುಡಿ ಸರ್ಕಾರಿ ಶಾಲೆಗೆ ಪದವೀಧರರ ಸಂಘದಿಂದ ನೀಡಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕವು ಒಂದು ಮಾದರಿಯಾಗಿದೆ ಎಂದು ಸಹಕಾರ ಸಂಘಗಳ ಉಪನಿರ್ದೇಶಕ ವಾಸುದೇವ್ ಹೇಳಿದರು.
ನಗರದ ಕುವೆಂಪು ರಸ್ತೆಯ ಪದವೀಧರರ ಸಹಕಾರ ಸಂಘ(ನಿ) ಸಂಸ್ಥೆಯು ನಗರದ ದುರ್ಗಿಗುಡಿಯ ಸರ್ಕಾರಿ ಮಾದರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಕೊಡುಗೆ ನೀಡಿದ 100 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಶುದ್ದಿಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Also read: ಅಮೆಚೂರ್ ನ್ಯಾಷನಲ್ ಗೇಮ್ಸ್ : 11 ಪದಕ ಗಳಿಸಿದ ರಾಜ್ಯದ ಕ್ರೀಡಾಪಟುಗಳು
ಈ ಸಂದರ್ಭದಲ್ಲಿ ಸಂಘದ ಹಿರಿಯ ನಿರ್ದೇಶಕರಾದ ಜೋಗದ ವೀರಪ್ಪನವರು ಮಾತನಾಡಿ, ಶಾಲೆಯೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಹೆಚ್.ಸಿ. ಸುರೇಶ್, ಭುವನೇಶ್ವರಿ, ಎಸ್.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ  ಗೋಪಾಲಕೃಷ್ಣ, ಡಾ. ಚಂದ್ರಶೇಖರಪ್ಪ, ಖಜಾಂಚಿ ರಾಜಶೇಖರ್, ರುದ್ರೇಶ್, ಉಪಾದ್ಯಕ್ಷೆ  ಮಮತಾ,  ರಮ್ಯಾ, ಜಗದೀಶ, ಎಸ್.ಹೆಚ್. ಪ್ರಸನ್ನ, ಮತ್ತು ಸಿಬ್ಬಂದಿಗಳು, ಶಾಲಾ ಮುಖ್ಯೋಪಾದ್ಯಾಯರಾದ  ಮಲ್ಯಾನಾಯ್ಕ್, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಶೆಟ್ಟರ್ ಹಾಗೂ ಎಲ್ಲಾ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
	    	



 Loading ...
 Loading ... 
							



 
                
Discussion about this post