ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿರುವ ಹಾಸ್ಯ ನಟ ಚಿಕ್ಕಣ್ಣ Comedian Chikkanna ಅಭಿನಯದ ಉಪಾಧ್ಯಕ್ಷ ಚಿತ್ರ ಜ.26ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನಿಲ್‍ಕುಮಾರ್ ಹೇಳಿದರು.
ಚಿತ್ರ ಪ್ರಚಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಣ್ಣ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯಂತ ಜನಪ್ರಿಯ ನಟರಾಗಿದ್ದಾರೆ. ಮುಗ್ಧತೆಯನ್ನು ಹೊಂದಿರುವ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರ ಬಹು ನಿರೀಕ್ಷಿತ ಚಿತ್ರ ಉಪಾಧ್ಯಕ್ಷ ಈ ತಿಂಗಳ 26ಕ್ಕೆ ಬಿಡುಗಡೆಯಾಗಲಿದೆ. ಕನ್ನಡಿಗರು ಚಿತ್ರವನ್ನು ನೋಡಿ, ಪ್ರೋತ್ಸಾಹಿಸಬೇಕು ಎಂದರು.

Also read: ಎನ್‍ಇಪಿ ಗೊಂದಲ ಮೂಡುವುದಕ್ಕೆ ಎಡಪಂಥಿಯರು ಕಾರಣ: ಡಿ.ಎಸ್. ಅರುಣ್ ನೇರ ಆರೋಪ
ನಾಯಕ ಚಿಕ್ಕಣ್ಣ ಮಾತನಾಡಿ, ನಾನು ಇದುವರೆಗೂ ನೂರಾರು ಚಿತ್ರಗಳನ್ನು ಮಾಡಿದ್ದೇನೆ. ಆದರೆ ನಾಯಕನಾಗಿ ಇದೇ ಮೊದಲ ಬಾರಿಗೆ ನಿಮ್ಮ ಮುಂದೆ ಬಂದಿದ್ದೇನೆ. ಇದೊಂದು ಹಳ್ಳಿಯ ಸೊಗಡಿನ ಕತೆ, ಒಂದು ಒಳ್ಳೆ ಸಿನಿಮಾವನ್ನು ಕನ್ನಡಿಗರೇ ನಿರ್ಮಿಸಿ ಅಭಿನಯಿಸಿ ನಿಮ್ಮ ಮುಂದೆ ತಂದಿದ್ದಾರೆ. ಈಗಾಗಲೇ ಟೀಜರ್ ಮತ್ತು ಟ್ರೈಲರ್ ಹಾಡುಗಳು ಜನರ ಮನ ಗೆದ್ದಿವೆ. ಕನ್ನಡದ ಹಲವು ನಾಯಕ ನಟರ ಜೊತೆ ನಾನು ಅಭಿನಯಿಸಿದ್ದೇನೆ. ಆ ಎಲ್ಲಾ ನಟರು ನನ್ನನ್ನು ಹರಿಸಿದ್ದಾರೆ. ಕನ್ನಡಿಗರಾದ ನೀವು ನನ್ನನ್ನು ಬೆಂಬಲಿಸಿ, ಚಿತ್ರ ನೋಡಿ ಎಂದರು.

ನಟ ಧರ್ಮಣ್ಣ ಮಾತನಾಡಿ, ಗಾರೆ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಹೀರೋ ಆಗಿ ನಟಿಸುತ್ತಿದ್ದಾನೆ ಎಂದರೆ, ಅದು ಸುಲಭದ ಮಾತಲ್ಲ. ಕಷ್ಟಗಳ ನಡುವೆ ಅರಳಿದ ಹುಡುಗ ಈ ಚಿಕ್ಕಣ್ಣ, ಅದೇ ಮುಗ್ಧತೆ, ವಿನಯ ಈಗಲೂ ಇದೆ. ಹಾಸ್ಯದ ಮೂಲಕವೇ ಕನ್ನಡಿಗರ ಮನಗೆದ್ದ ಅವರು, ಈ ಚಿತ್ರದಲ್ಲೂ ಯಶಸ್ಸು ಕಾಣುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post