ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಆಕಾಶ್ ಮತ್ತು ಭೈಜೂಸ್ Akash Baijus ಕೇಂದ್ರ ನಗರದಲ್ಲಿ ತರಬೇತಿ ಕೇಂದ್ರ ವನ್ನು ಆರಂಭಿಸಿದೆ ಎಂದು ಕೇಂದ್ರದ ಪ್ರಾದೇಶಿಕ ಕಾರ್ಯಾಚರಣೆ ಮುಖ್ಯಸ್ಥ ಅರವಿಂದ್ ಕುಮಾರ್ ಹೇಳಿದರು.
ಈ ಕುರಿತಂತೆ ಮಾತನಾಡಿದ ಅವರು, ಆಕಾಶ್ ಮತ್ತು ಭೈಜೂಸ್ ಕೇಂದ್ರ ಈಗಾಗಲೇ 24 ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ ಎಂದರು.
ಪ್ರತಿ ವರ್ಷ 2.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದು, ಶಿವಮೊಗ್ಗದಲ್ಲಿ ಇದರ ಪ್ರಥಮ ತರಗತಿ ಈಗ ಪ್ರಾರಂಭವಾಗುತ್ತಿದೆ ಎಂದರು.
ಬಾಲರಾಜ್ ಅರಸ್ ರಸ್ತೆಯ ಜೋಯಲ್ಲುಕ್ಕಾಸ್ ಕಟ್ಟಡದ ಮೇಲ್ಭಾಗದಲ್ಲಿ ಕೇಂದ್ರವಿದ್ದು, ಇಲ್ಲಿ 5 ತರಗತಿ ಕೊಠಡಿಗಳಿವೆ. ೬೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದರು.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉಪಯೋಗ ನಗರದಲ್ಲಿ ಭೈಜೂಸ್ ತರಬೇತಿ ಕೇಂದ್ರ ವಾಗಲಿದೆ. ಅದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಫೌಂಡೇಷನ್ ಮಟ್ಟದ ತರಬೇತಿ ಸಹ ನೀಡಲಾಗುವುದು.
Also read: ಸಂತೋಷ್ ಕೆ ಪಾಟೀಲ್ ಸುಳ್ಳು ಆರೋಪ ಹಿನ್ನೆಲೆ ಮಾನನಷ್ಟ ಮೊಕದ್ದಮೆ ದಾಖಲು: ಸಚಿವ ಈಶ್ವರಪ್ಪ
ನಮ್ಮಲ್ಲಿ ನುರಿತ ತರಬೇತುದಾರರಿದ್ದಾರೆ. ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ಇದರ ಪ್ರಯೋಜನವನ್ನು ನಗರದ ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಕೇಂದ್ರದ ಮುಖ್ಯಸ್ಥ ಅಶೋಕ್ ಶಂಕರಪ್ಪ, ಸೇಲ್ಸ್ ಗ್ರೂಪ್’ನ ಮುಖ್ಯಸ್ಥ ಪ್ರೇಮ್ ಚಂದ್ರ ರಾಯ್, ಪ್ರಮುಖರಾದ ಪ್ರಮೋದ್ ಕುಮಾರ್, ವಿಶ್ವನಾಥ್, ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post