ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ಗೆಳೆಯ ವೃಂದದ ವತಿಯಿಂದ ಶ್ರೀ ಗೋಪಾಲದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು.
ಈ ಪ್ರಯುಕ್ತ ಕೆ.ಆರ್.ಪುರಮ್, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ಗೋಪಾಲದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು
ನಂತರ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮಧ್ವ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ಅನಂತರ ಗೋಪಾಲದಾಸರ ಬಗ್ಗೆ ಹೊಳೆಹೊನ್ನೂರು ನವರತ್ನ ಶ್ರೀನಿವಾಸಾಚಾರ್, ಕುಷ್ಟಗಿ ಶ್ರೀನಾಥಚಾರ್ ಇವರುಗಳಿಂದ ಉಪನ್ಯಾಸ ನಡೆಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯ ವೃಂದದ ಕಾರ್ಯದರ್ಶಿ ಹೆಚ್.ಎಸ್. ನಾಗೇಂದ್ರ, ಹಂಡೆ ಬಿಂದುಮಾಧವ, ಕುಷ್ಟಗಿ ವಾಸುದೇವ ಮೂರ್ತಿ, ಕುಷ್ಠಗಿ ಅನಂತಾಚಾರ್, ಸತ್ಯನಾರಾಯಣ, ಕೇಶವ ಮೂರ್ತಿ, ಅನಂತ ರಾಮದ್ಯಾನಿ, ಎಮ್.ಜಿ.ವಾಸುದೇವ ಮೂರ್ತಿ, ಗಾಯತ್ರಿ ಅಣ್ಣೀಗೆರೆ, ಶ್ರೀನಿವಾಸ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post