ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿವಿ, #Kuvempu VV ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಚೆನ್ನೈ (ಸಮಾಜದಲ್ಲಿರುವ ಜ್ಞಾನ ಕುರಿತಾದ ಸಂವಾದಕ್ಕೆ ಮೀಸಲಾದ ನಿಯತಕಾಲಿಕೆ) ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಫೆ. 20ರಿಂದ 22ರವರೆಗೆ ‘ಸಮಾಜದಲ್ಲಿ ಜ್ಞಾನ ಸಂವಾದ’ ಸಮಾವೇಶ ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಜ್ಞಾನದ ವಿವಿಧ ಆಯಾಮಗಳ ಕುರಿತು ಚರ್ಚೆಯ ಅವಶ್ಯಕತೆ ಅನಿವಾರ್ಯವಾಗಿದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಬಲವಾಗಿ ಬೆಳೆಯುತ್ತಿದೆ. ಆದರೆ ಈ ಜ್ಞಾನ ಎಲ್ಲರನ್ನೂ ತಲುಪದೇ ಒಂದು ಚೌಕಟ್ಟಿನ ಮಿತಿಯೊಳಗಿದೆ. ಯಾವುದು ಜ್ಞಾನ ಎಂಬ ಜಿಜ್ಞಾಸೆಯ ಜೊತೆಗೆ ಅದು ತಲುಪುವ ವೇಗವೂ ಕೂಡ ಪರಂಪರೆಯ ಜೊತೆಗೆ ಸಾಗಿ ನಮ್ಮ ಸಹಜ ಪರಂಪರೆಗಳು ಆಧುನಿಕ ತಂತ್ರಜ್ಞಾನದ ಜ್ಞಾನ ಶಾಖೆಯ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಹೀಗಾಗಿ ಜ್ಞಾನದ ವಿಸ್ತರಣೆ ಮತ್ತು ಈ ಕುರಿತು ಪ್ರಯೋಗಶೀಲವಾಗಿಯಾದರೂ ಒಂದು ಸಂವಾದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಈ ಸಂವಾದವನ್ನು ಆಯೋಜಿಸಲಾಗಿದೆ ಎಂದರು.

ಕೃಷಿ, ನೀರಾವರಿ, ಜವಳಿ, ಗುಡಿ ಕೈಗಾರಿಕೆ, ವಸತಿ, ಸಾರಿಗೆ, ಆಹಾರ, ಸಾಮಾಜಿಕ ಸಂಘಟನೆ, ಕಲೆ, ಕುಟುಂಬ ಈ ಮುಂತಾದ ಅನೇಕ ವಿಷಯಗಳು ನಮ್ಮ ಆಧುನಿಕ ಜ್ಞಾನದ ಕೇಂದ್ರೀಕೃತವಾಗಿದೆ. ಈ ಎಲ್ಲಾ ವಿಷಯಗಳನ್ನು ಮುಕ್ತ ಸಂವಾದದ ರೀತಿಯಲ್ಲಿ ಚರ್ಚಿಸಬೇಕಾಗಿದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜ್ಞಾನದ ಆಯ್ಕೆಗಳ ಬಗ್ಗೆ ವಿಚಾರ ವಿನಿಮಯಕ್ಕಾಗಿ ಈ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶದಲ್ಲಿ ದೇಶದ ವಿವಿಧ ವಿಭಾಗಗಳ ಗಣ್ಯರು, ರೈತರು, ಕಲಾವಿದರು, ತಜ್ಞರು, ಕುಶಲಕರ್ಮಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ವಿದ್ವಾಂಸರು, ಸಂಗೀತಗಾರರು, ಅಲೆಮಾರಿಗಳು ಹೀಗೆ ವಿಭಿನ್ನ ಕ್ಷೇತ್ರದಲ್ಲಿರುವವರು ಮೂರು ದಿನಗಳ ಕಾಲವೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಲಿದ್ದಾರೆ.

Also read: ಫೆ.18ರಂದು ಕೇಂದ್ರ ಬಜೆಟ್ ವಿಶ್ಲೇಷಣೆ | ಸಾರ್ವಜನಿಕರೊಂದಿಗೆ ವಿಶ್ವನಾಥ್ ಭಟ್ ಸಂವಾದ
ಫೆ. 20ರಂದು ಸಮಾಜದಲ್ಲಿನ ಜ್ಞಾನ ಸಮಾನ ಮತ್ತು ನ್ಯಾಯಯುತ ಸಮಾಜಕ್ಕೆ ಅಡಿಪಾಯ, ಬಡತನ ಮತ್ತು ಜ್ಞಾನದ ಪ್ರಶ್ನೆ, ಕನ್ನಡದ ಜ್ಞಾನ ಸಂಪ್ರದಾಯಗಳ ಕುರಿತು ವಿಚಾರಗೋಷ್ಠಿಗಳಿದ್ದರೆ, ಫೆ. 21 ರಂದು 21ನೇ ಶತಮಾನದಲ್ಲಿ ಸ್ವರಾಜ್ಯವನ್ನು ಕಲ್ಪಿಸಿಕೊಳ್ಳುವುದು, ಜ್ಞಾನದ ಸಮಸ್ಯೆ ಕುರಿತು ಹಾಗೂ ಅಭಿವೃದ್ಧಿ ಪ್ರವಚನ, ಜನರ ಚಳವಳಿಯಲ್ಲಿ ಜ್ಞಾನ ಕುರಿತು ಹಾಗೂ ಕೃತಕ ಬುದ್ಧಿಮತ್ತೆ, ಕಲೆ ಮತ್ತು ಜ್ಞಾನ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಫೆ. 22ರಂದು ಭಾರತವು ಜಾಗತಿಕ ದಕ್ಷಿಣದಿಂದ ಧ್ವನಿಯಾಗಿ ಜ್ಞಾನದ ಆಯಾಮ ಕುರಿತು ವಿಚಾರಗೋಷ್ಠಿ ನಡೆಯಲಿದೆ. ವಿಚಾರ ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳೆಲ್ಲವನ್ನೂ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.

ಪರ‍್ಯಕ್ರಮದಲ್ಲಿ ಕುಲಸಚಿವರಾದ ಎ.ಎಲ್. ಮಂಜುನಾಥ್, ಎಸ್.ಎಂ. ಗೋಪಿನಾಥ್, ಹಣಕಾಸು ವಿಭಾಗದ ಅಧಿಕಾರಿ ಹೆಚ್.ಎನ್. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಪ ಕುಲಪತಿ ಪ್ರೊ ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್, ಕನ್ನಡ ಪ್ರಾಧ್ಯಾಪಕ ಡಾ. ಪ್ರಕಾಶ್ ರ‍್ಗನಳ್ಳಿ, ಪಿಆರ್‌ಒ ಡಾ. ಸತ್ಯಪ್ರಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post