ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ International Women’s Day ಅಂಗವಾಗಿ ನಾಯರ್ ಸಮಾಜದ ಸೌಪರ್ಣಿಕ ಮಹಿಳಾ ವಿಭಾಗದ ವತಿಯಿಂದ ಮಹಿಳಾ ಸಾಧಕಿಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ, ರಾಜಕೀಯದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಪ್ರತಿಮ ಸಾಧಕಿ, ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ Mayor Suneetha Annappa ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಾವಿತ್ರಿ ಪೊದುವಾಳ್, ಕಾರ್ಯದರ್ಶಿ ಹೇಮಾ ಜಯಕುಮಾರ್, ಖಜಾಂಚಿ ಸಿಂಧು ಸತೀಶ್ ಹಾಗೂ ಸಂಘದ ನಿರ್ದೇಶಕರಾದ ಜಯಶ್ರೀ ಪಿಳ್ಳೈ, ಗೀತಾಂಜಲಿ, ಡಾಕ್ಟರ್ ಲತಾ ರಮೇಶ್, ಮಾಲತಿ ಪುರುಷೋತ್ತಮನ್, ಶೈನಿ ಕೃಷ್ಣನ್, ಉಷಾ ಮೋಹನ್, ಜಾನಕಿ ಗೋವಿಂದನ್ ನಾಯರ್ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Also read: ಮಹಿಳೆಯರಿಗೆ ಸಮಾನ ಅವಕಾಶ ನೀಡದಿದ್ದಲ್ಲಿ ಆತ್ಮನಿರ್ಭರತೆ ಸಾಧ್ಯವಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನಾಯರ್ ಸಮಾಜದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಎನ್.ಡಿ. ಸತೀಶ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಟಿ.ವಿ. ಮೋಹನ್, ಶಿವಮೊಗ್ಗದ ಸಹ ಕಾರ್ಯದರ್ಶಿ ಜಯಕುಮಾರ್ ಹಾಗೂ ಪುರುಷೋತ್ತಮ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post