ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿವಮೊಗ್ಗ #Shivamogga ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾ ಶಿವರಾಜಕುಮಾರ್ #GeethaShivarajkumar ಅವರು ಪ್ರಚಾರ ಆರಂಭಿಸಲು ನಾಳೆ ಕ್ಷೇತ್ರಕ್ಕೆ ಆಗಮಿಸಲಿದ್ದು, ಕಾರೇಹಳ್ಳಿ ಬಳಿಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ #BKSangameshwar ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ಗೀತಾ ಶಿವರಾಜಕುಮಾರ್ ಅವರು ಚುನಾವಣೆಯ ಪ್ರಯುಕ್ತ ಕ್ಷೇತ್ರಕ್ಕೆ ಆಗಮಿಸಲಿದ್ದು, ನಗರದಲ್ಲಿ ಅದ್ದೂರಿ ರ‍್ಯಾಲಿ ನಡೆಯಲಿದೆ ಎಂದಿದ್ದಾರೆ.

ಕಾರೇಹಳ್ಳಿ, ಕೆಂಪೇಗೌಡ ನಗರ, ಬಾರಂದೂರು, ಮಸರಹಳ್ಳಿ, ಮಾರುತಿನಗರ, ಶಿವನಿ ಕ್ರಾಸ್, ಸಾದತ್ ಕಾಲೋನಿ, ಗಾಂಧಿ ಸರ್ಕಲ್, ಒಎಸ್’ಎಂ ರಸ್ತೆ(ಶಾಸಕರ ಮನೆ ಮುಂಭಾಗ), ರಂಗಪ್ಪ ಸರ್ಕಲ್, ಸಿಎನ್ ರಸ್ತೆ, ಮಾಧವಾಚಾರ್ ಸರ್ಕಲ್, ಬಿಎಚ್ ರಸ್ತೆ, ಅಂಡರ್ ಬ್ರಿಡ್ಜ್, ಉಂಬ್ಳೆಬೈಲ್ ರಸ್ತೆ, ಜಯಶ್ರೀ ಸರ್ಕಲ್, ಜನ್ನಾಪುರ, ಸಿದ್ದಾಪುರ, ಬೈಪಾಸ್’ವರೆಗೂ ಬೈಕ್ ರ‍್ಯಾಲಿ ನಡೆಯಲಿದೆ.

ನಗರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರೂ ಆದ ಬಿ.ಕೆ. ಮೋಹನ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಕ್ಷೇತ್ರದ ಕಾಂಗ್ರೆಸ್ ಭರವಸೆಯ ಯುವ ನಾಯಕ ಬಿ.ಎಸ್.ಗಣೇಶ್ ಇನ್ನೂ ಮುಂತಾದ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post