ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಸರ್ಕಾರವಾಗಿ ಪರಿವರ್ತನೆ ಆಗುತ್ತಿದ್ದು, ಸಂವಿಧಾನದ ಹಕ್ಕುಗಳನ್ನೇ ಉಲ್ಲಂಘನೆ ಮಾಡಿ, ತುಷ್ಟೀಕರಣ ಅತಿರೇಖಕ್ಕೆ ಮುನ್ನಡಿ ಬರೆದಿದೆ. ಕೇವಲ ಮುಸ್ಲೀಂ ಯುವಕರಿಗೆ ಪೊಲೀಸ್ ಟ್ರೈನಿಂಗ್ ನಡೆಸುತ್ತಿದೆ. ಇದಕ್ಕೆ ಹಿಂದೂ ಸಮಾಜದ ಧಿಕ್ಕಾರವಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದ್ದಾರೆ.
ಶನಿವಾರ ತಮ್ಮ ಕಚೇರಿ ಕರ್ತವ್ಯ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ಅಲ್ಪಸಂಖ್ಯಾತರ ಪರವಾದ ರಾಜ್ಯ ಸರ್ಕಾರದ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರದ ಕಾರ್ಯಕ್ರಮಗಳು ಈ ಮುಂಚೆ ನಾಡಗೀತೆ, ವಂದೇ ಮಾತರಂ ಗೀತೆಗಳ ಮೂಲಕ ಶುರುವಾಗುವ ಪರಿಪಾಠ ಇತ್ತು. ಆದರೆ ಈಗ ಸರ್ಕಾರಿ ಕಾರ್ಯಕ್ರಮಗಳು ಕುರಾನ್ ಪಠಣದ ಮೂಲಕ ಶುರುವಾಗುತ್ತಿದೆ. ಇಂತಹ ಕೆಟ್ಟ ಪರಿಪಾಠಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾಂದಿ ಹಾಡಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದ್ದು. ಮಾತೆತ್ತಿದ್ದರೆ ಪ್ರಧಾನಿ ಮೋದಿ ಅವರನ್ನು ಟೀಕಿಸಿ, ಭೋದನೆ ಮಾಡುವ ಮಹಾಪುರುಷ ಸಂತೋಷ್ ಲಾಡ್, ಸಂವಿಧಾನ ವಿರೋಧಿ ಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಇದಕ್ಕೆ ಹಿಂದೂ ಸಮಾಜ ಧಿಕ್ಕಾರ ಹೇಳುತ್ತದೆ ಎಂದು ಗುಡುಗಿದರು.

ಮುಸ್ಲೀಂ ಸಮಾಜವೇನು ಪ್ರತ್ಯೇಕವಾಗಿಲ್ಲ, ಒಬಿಸಿಯಲ್ಲೂ ಅವರಿಗೆ ಅವಕಾಶವಿದೆ. ವಿವಿಧ ವಿಭಾಗಗಳಲ್ಲೂ ಅವರಿಗೆ ನೇಮಕಾತಿ ಅವಕಾಶವಿದೆ. ಹೀಗಿದ್ದೂ ಅವರಿಗೆ ಪ್ರತ್ಯೇಕ ಅನುದಾನದ ಮೂಲಕ ತರಬೇತಿ ನೀಡುವುದೇಕೆ? ಇವತ್ತು ದೇಶವನ್ನು ಉದ್ವಂಸ ಗೊಳಿಸುವ ಅಪರಾಧ ಕೃತ್ಯಗಳಲ್ಲಿ ಮುಸ್ಲಿಂ ಸಮಾಜದ ಯುವಕರೇ ಹೆಚ್ಚಾಗಿರುವುದನ್ನು ಕ್ರೈಮ್ ಬ್ಯೂರೋ ಅಂಕೆ ಸಂಖ್ಯೆಗಳೇ ಹೇಳುತ್ತಿವೆ. ಹೀಗಿದ್ದೂ ಮುಸ್ಲೀಂ ಯುವಕರಿಗೆ ಹೆಚ್ಚು ಆದ್ಯತೆ ನೀಡುತ್ತೀರಿ, ಇದರ ಉದ್ದೇಶವೇನು ? ಒಂದು ರೀತಿ ಮುಸ್ಲಿಂ ಯುವಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾನೂನಾತ್ಮಕ ಅವಕಾಶ ನೀಡುವ ಹುನ್ನಾರ ಇದರ ಹಿಂದೆ ಇದೆಯಾ ಎಂದು ದೂರಿದರು.

ಇದೇ ವೇಳೆ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತುಮಾತನಾಡಿ, ರಾಜ್ಯದ ರಸ್ತೆಗಳಲ್ಲಿ ಮಾತ್ರ ಗುಂಡಿ ಗೊಟರು ಬಿದ್ದಿಲ್ಲ, ಕಾನಾನೂಸುವ್ಯವಸ್ಥೆ ಕೂಡ ಹಳ್ಳ ಹಿಡಿದಿದೆ. ಸಮಾಜದ ವಿರೋಧಿಶಕ್ತಿಗಳಿಗೆ ಸರ್ಕಾರ ಬೆಂಬಲನೀಡುತ್ತಿದೆ ಎನ್ನುವ ಆತಂಕ ಶುರುವಾಗಿದೆ ಎಂದು ಆರೋಪಿಸಿದ ಅವರು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿವರ ನೀಡಿದರು.

ರಾಜ್ಯ ದಲ್ಲೂ ಐ ಲವ್ ಮೊಹಮ್ಮದ್ ಕೃತ್ಯ ನಡೆದಿದೆ. ಕೆಲವು ಮುಸ್ಲಿಂ ಅಂತರಿಕ ಭಯೋತ್ಪಾದಕರು, ಇದನ್ನು ಶುರು ಮಾಡಿದ್ದಾರೆ. ಉತ್ತರ ಪ್ರದೇಶದ ಮೌಲನಾ ತೌಫಿಕ್ ರಾಹ್ ಖಾನ್ ಎಂಬಾತ, ಈ ರೀತಿಯ ಕೇತ್ಯಕ್ಕೆ ಸೂತ್ರದಾರನಾಗಿದ್ದು, ಬೆಳಗಾವಿ, ಮೈಸೂರಿನಲ್ಲಿ ಈ ಪ್ರಕರಣಗಳ ಬಯಲಾಗಿವೆ.ಇದರ ನಡುವೆ ಬೆಳಗಾವಿಯಲ್ಲೇ ಮುಸ್ಲಿಂ ಯುವಕರಿಗೆ ಪೆÇಲೀಸ್ ಸಬ್ ಇನ್ಸೆಪೆಕ್ಟರ್ ಹುದ್ದೆಗಳ ನೇಮಕಾತಿಯ ತರಬೇತಿ ನಡೆದಿದ್ದು ಗುಮಾನಿ ಹುಟ್ಟಿಸಿದೆ. ಈ ಕೃತ್ಯಗಳಿಗೆ ಆಮ್ ಆದ್ಮಿ ಪಕ್ಷ, ಎಸ್‍ಡಿಪಿಐ ಪಕ್ಷದ ಕುಮ್ಮಕ್ಕು ಇದೆ ಎಂದು ಆರೋಪಿಸಿದರಲ್ಲದೆ, ಐ ಲವ್ ಮೊಹಮ್ಮದ್ ಕೃತ್ಯಕ್ಕೆ ಬೆಂಬಲಿಸುವ ಮುಸ್ಲಿಂ ಸಮಾಜ ತಾಕತ್ತಿದ್ದರೆ ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಐ ಲವ್ ಮೊಹಮ್ಮದ್ ಎಂದು ನಾಮಫಲಕ ಹಾಕಿಕೊಂಡು ವ್ಯಾಪಾರ ಮಾಡಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಎಸ್. ಜ್ಣಾನೇಶ್ವರ್, ದೀನ್ ದಯಾಳ್, ಶ್ರೀನಾಗ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post