No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Friday, July 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ಮಿತವ್ಯಯದ ಪಾಠ ಅರ್ಥವಾಗದು: ಶಾಸಕ  ಚನ್ನಬಸಪ್ಪ

kalpa News by kalpa News
May 13, 2026
in ಶಿವಮೊಗ್ಗ
1
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ, ಅಭಿವೃದ್ಧಿ ಶೂನ್ಯ: ಶಾಸಕ ಚನ್ನಬಸಪ್ಪ ವಾಗ್ದಾಳಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ |

ದೇಶದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಶಿಸ್ತು ಮತ್ತು ಮಿತವ್ಯಯದ ಬಗ್ಗೆ ಮಾಡಿರುವ ಮನವಿಯನ್ನು ಕಾಂಗ್ರೆಸ್ ನಾಯಕರು “ವೈಫಲ್ಯ” ಎಂದು ಕರೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಶಾಸಕ ಚನ್ನಬಸಪ್ಪ MLA Channabasappa ಲೇವಡಿ ಮಾಡಿದ್ದಾರೆ.

ಚುನಾವಣೆ ಮುಗಿದ ಮೇಲೆ ದೇಶದ ವಾಸ್ತವ ಸ್ಥಿತಿಯನ್ನು ಮರೆಮಾಚದೆ, ಜನರನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಹಸ ಕೇವಲ ಮೋದಿಯವರಿಗೆ ಮಾತ್ರ ಸಾಧ್ಯ. ಆದರೆ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರಿಗೆ ದೇಶದ ಆರ್ಥಿಕ ಸ್ವಾವಲಂಬನೆ ಎನ್ನುವುದು ವೈಫಲ್ಯದಂತೆ ಕಾಣುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ನಾಯಕರು ಮೋದಿಯವರನ್ನು ಪ್ರಶ್ನಿಸುವ ಮೊದಲು ತಮ್ಮ ಪಕ್ಷದ ಆಡಳಿತಾವಧಿಯ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಲಿ. 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಆರ್ಥಿಕ ಸಂಕಷ್ಟ ಎದುರಾದಾಗ, ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಕಡ್ಡಾಯವಾಗಿ ಠೇವಣಿ ಇಡುವ ‘Compulsory Deposit Scheme’ ಜಾರಿಗೆ ತಂದು ಜನರ ಹಣವನ್ನೇ ಕಸಿದುಕೊಂಡಿದ್ದರು ಮತ್ತು ತೈಲ ಉಳಿತಾಯಕ್ಕಾಗಿ ಜನರ ಮೇಲೆ ಕಠಿಣ ನಿರ್ಬಂಧ ಹೇರಿದ್ದರು. 2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ ಸತ್ಯವನ್ನು ರಾಹುಲ್ ಗಾಂಧಿಯವರು ಮರೆತಂತಿದೆ.

ಮೋದಿಯವರು ಮೆಟ್ರೋ ಬಳಸಿ ಅಥವಾ ಇಂಧನ ಉಳಿಸಿ ಎಂದು ಕರೆ ನೀಡುತ್ತಿರುವುದು ಕೇವಲ ಪೆಟ್ರೋಲ್ ಉಳಿಸಲು ಮಾತ್ರವಲ್ಲ, ಅದು ಮುಂದಿನ ತಲೆಮಾರಿಗೆ ಮಾಲಿನ್ಯಮುಕ್ತ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ವಿದೇಶಿ ವಸ್ತುಗಳ ವ್ಯಾಮೋಹ ಬಿಟ್ಟು ದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ ಎಂದು ಹೇಳುವುದು ‘ಆತ್ಮನಿರ್ಭರ ಭಾರತ’ದ ಸಂಕಲ್ಪವೇ ಹೊರತು ಅಸಹಾಯಕತೆಯಲ್ಲ. ರೈತರಿಗೆ ಕಡಿಮೆ ರಸಗೊಬ್ಬರ ಬಳಸಿ ಎಂದು ಹೇಳುತ್ತಿರುವುದು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮತ್ತು ವಿಷಮುಕ್ತ ಕೃಷಿಯನ್ನು ಉತ್ತೇಜಿಸಲೆಂದೇ ಹೊರತು ಗೊಬ್ಬರದ ಕೊರತೆಯಿಂದಲ್ಲ. ಕಾಂಗ್ರೆಸ್ಸಿಗರು ಜನರ ಮನಸ್ಸಿನಲ್ಲಿ ಭಯ ಬಿತ್ತುವುದನ್ನು ಬಿಟ್ಟು, ದೇಶದ ಪ್ರಗತಿಯಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದನ್ನು ಕಲಿಯಲಿ. ಮೋದಿಯವರು ದೇಶವನ್ನು ಕಟ್ಟುವ ಹಾದಿಯಲ್ಲಿದ್ದಾರೆ, ಅದನ್ನು ಕೆಡವಲು ಯತ್ನಿಸುತ್ತಿರುವವರು ಯಾರು ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ.
ಇತಿಹಾಸದುದ್ದಕ್ಕೂ ಹಗರಣಗಳಲ್ಲೇ ಮುಳುಗಿ, ದೇಶದ ಬೊಕ್ಕಸವನ್ನು ಲೂಟಿ ಮಾಡಿ, ಭಾರತವನ್ನು ವಿಶ್ವದ ಮುಂದೆ ಭಿಕ್ಷಾಪಾತ್ರೆಯೊಂದಿಗೆ ನಿಲ್ಲಿಸಿದ್ದ ಕಾಂಗ್ರೆಸ್ಸಿಗರಿಗೆ ಇಂದು ದೇಶಭಕ್ತಿ ಮತ್ತು ಶಿಸ್ತಿನ ಪಾಠ ಅರ್ಥವಾಗುತ್ತಿಲ್ಲ. ದೇಶಕ್ಕಾಗಿ ‘ಝೋಳಿಗೆ’ ಹಿಡಿದು ಹೊರಡಲು ಸಿದ್ಧವಿರುವ ಮೋದಿಯವರ ತ್ಯಾಗದ ಬಗ್ಗೆ ಮಾತನಾಡುವ ನೈತಿಕತೆ, ವಿದೇಶಿ ಮಣ್ಣಿನಲ್ಲಿ ನಿಂತು ಸ್ವದೇಶವನ್ನು ನಿಂದಿಸುವ ರಾಹುಲ್ ಗಾಂಧಿಯವರಿಗಾಗಲಿ ಅಥವಾ ಅವರ ಗುಲಾಮರಿಗಾಗಲಿ ಖಂಡಿತ ಇಲ್ಲ. ಹನ್ನೆರಡು ವರ್ಷಗಳ ಆಡಳಿತದ ನಂತರವೂ ನಮಗೆ ಮಾರ್ಗದರ್ಶನ ನೀಡುವ ಪ್ರಧಾನಿ ಬೇಕೇ ಹೊರತು, ಹನ್ನೆರಡು ನಿಮಿಷವೂ ದೇಶದ ಹಿತದೃಷ್ಟಿಯಿಂದ ಯೋಚಿಸದ ಇಂತಹ ದಿವಾಳಿ ಕಾಂಗ್ರೆಸ್ ನಾಯಕರು ಬೇಕಿಲ್ಲ.

ನಿಮ್ಮ ಈ ಕಪಟ ನಾಟಕಕ್ಕೆ ಈಗಾಗಲೇ ದೇಶಾದ್ಯಂತ ಜನತೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನಿಮ್ಮ ಈ ಸುಳ್ಳಿನ ಸಾಮ್ರಾಜ್ಯವನ್ನು ದೇಶದ ಜನರು ಎಂದಿಗೂ ಒಪ್ಪುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲದಂತೆ ಮಾಡಲಿದ್ದಾರೆ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

 

Tags: Kannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsMLA ChannabasappaNews in KannadaNews KannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ | 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

Next Post

ಸಕ್ರೆಬೈಲಿನ ಪ್ರಕೃತಿ ಫಿಶ್ ಹೋಟೆಲ್ ಮಾಲೀಕ ಅಪಘಾತದಲ್ಲಿ ನಿಧನ

kalpa News

kalpa News

Next Post
ಸಕ್ರೆಬೈಲಿನ ಪ್ರಕೃತಿ ಫಿಶ್ ಹೋಟೆಲ್ ಮಾಲೀಕ ಅಪಘಾತದಲ್ಲಿ ನಿಧನ

ಸಕ್ರೆಬೈಲಿನ ಪ್ರಕೃತಿ ಫಿಶ್ ಹೋಟೆಲ್ ಮಾಲೀಕ ಅಪಘಾತದಲ್ಲಿ ನಿಧನ

Comments 1

  1. Pingback: ಸಕ್ರೆಬೈಲಿನ ಪ್ರಕೃತಿ ಫಿಶ್ ಹೋಟೆಲ್ ಮಾಲೀಕ ಅಪಘಾತದಲ್ಲಿ ನಿಧನ » kalpa.news

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL