ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಭಾಗದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, #Heavy Rain in Malenadu ಜಿಲ್ಲೆಯ ಅಣೆಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
ಪ್ರಮುಖವಾಗಿ ನಿನ್ನೆ ಒಂದೇ ದಿನ ಜಿಲ್ಲೆಯ ಬಹುತೇಕ ಡ್ಯಾಂಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಒಳ ಹರಿದುಬಂದಿದೆ. ಆದರೆ, ಭದ್ರಾ ಜಲಾಶಯಕ್ಕೆ ಮಾತ್ರ ಕಡಿಮೆಯಾಗಿದೆ.
ಲಿಂಗನಮಕ್ಕಿ ಅಣೆಕಟ್ಟೆ
ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ #Linganamakki Dam 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಗರಿಷ್ಠ 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 1760.11 ಅಡಿ ನೀರು ಸಂಗ್ರಹಗೊAಡಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಡ್ಯಾಂ ನಲ್ಲಿ 1741 ಅಡಿ ಕನಿಷ್ಠ ನೀರಿನ ಮಟ್ಟ ಇತ್ತು.
Also read: ಕುಂದಾಪುರ | ಭಾರೀ ಮಳೆ | ಕಮಲಶಿಲೆ ದೇವಾಲಯದ ಗರ್ಭಗುಡಿ ಪ್ರವೇಶಿಸಿದ ಕುಬ್ಜಾ ನದಿ | ಹೇಗಿದೆ ಪರಿಸ್ಥಿತಿ
ಗಾಜನೂರು ತುಂಗಾ ಅಣೆಕಟ್ಟೆ
ಗಾಜನೂರಿನ ತುಂಗಾ ಅಣೆಕಟ್ಟೆ #Gajnur Dam ಭರ್ತಿಯಾಗಿದ್ದು, ತುಂಗಾ ನದಿಗೆ 18,412 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಜಲಾಶಯ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬುಧವಾರದಿಂದ ಜಲಾಶಯದ 22 ಕ್ರಸ್ಟ್ ಗೇಟ್’ಗಳ ಪೈಕಿ14 ಗೇಟ್’ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಭದ್ರಾ ಜಲಾಶಯ(ಬಿಆರ್’ಪಿ)
ಭದ್ರಾ ಜಲಾಶಯಕ್ಕೆ #Bhadra Dam ನಿನ್ನೆ 5324 ಕ್ಯೂಸೆಕ್ಸ್ ನೀರು ಹರಿದು ಬಂದಿತ್ತು. ಜಲಾಶಯದ ಮಟ್ಟ 639.59 ಮೀಟರ್’ನಷ್ಟಿತ್ತು. ಇವತ್ತು ಬೆಳಗಿನ ಅಂಕಿ ಅಂಶಗಳ ಪ್ರಕಾರ ಭದ್ರಾ ಜಲಾಶಯಕ್ಕೆ 4908 ಕ್ಯೂಸೆಕ್ಸ್ ನೀರು ಹರಿದು ಬಂದಿದ್ದು ಜಲಾಶಯದ ನೀರಿನ ಮಟ್ಟ 136.1 ಅಡಿಯಷ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post