ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೊರೋನಾ ಲಾಕ್‌ಡೌನ್ ಎರಡನೆಯ ದಿನದ ಕರ್ಫ್ಯೂ ಇರುವುದರಿಂದ ನಗರದಲ್ಲಿ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಇಂತಹ ಸಂದರ್ಭದಲ್ಲಿ ನಗರದ ಹಲವು ಭಾಗಗಳಲ್ಲಿ ಇರುವ ನಿರ್ಗತಿಕರಿಗೆ ಊಟದ ಪ್ಯಾಕೆಟ್, ನೀರಿನ ಬಾಟಲ್‌ಗಳನ್ನು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಎಚ್.ಪಿ. ಗಿರೀಶ್, ಯುವ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರಾದ ಬಿ. ಲೋಕೇಶ್, ಎಸ್. ಕುಮರೇಶ್, ಈಟಿ ನಿತಿನ್ ಮುಖಂಡರಾದ ಆರ್. ಕಿರಣ್, ಟಿವಿ ರಂಜಿತ್, ಕೆ. ಪ್ರಕಾಶ್ ಪದಾಧಿಕಾರಿಗಳಾದ ಗಗನ್ ಪವನ್, ರಾಕೇಶ್, ಪೂರ್ವಿಕ್, ಚಂದನ್, ನಿಹಾರ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post