ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಕೊರೋನಾ ನಾಲ್ಕನೆಯ ಅಲೆಯ Corona 4th Wave ಭೀತಿಯ ನಡುವೆಯೇ ಜಿಲ್ಲೆಯಲ್ಲಿಯೂ ಈ ಬಾರಿ 2 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರು ಈ ಕುರಿತಂತೆ ಹಲವು ಮಾಹಿತಿ ನೀಡಿದ್ದು, ಪ್ರತಿ ದಿನ 80 ರಿಂದ 100 ಜನರ ಕೊರೊನೊ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ 240 ಪರೀಕ್ಷೆಗಳನ್ನು ನಡೆಸಲಾಗಿದೆ. 02 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಒಂದು ಪ್ರಕರಣ ಅಂತರಾಷ್ಟ್ರೀಯ ಟ್ರಾವೆಲ್ ಹಿಸ್ಟರಿಯದ್ದಾಗಿದೆ ಎಂದಿದ್ದಾರೆ.

- 108 ಆಂಬುಲೆನ್ಸ್ 24, ನಗುಮಗು 07, ಜೆಎಸ್‌ವಿ 31: ಒಟ್ಟು 60 ಆಂಬುಲೆನ್ಸ್’ಗಳಿವೆ
- ತಾಲೂಕುಗಳಲ್ಲಿ 6 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್‌ಗಳು, ಐಸಿಯು ಬೆಡ್‌ಗಳಿವೆ
- ಸಿಮ್ಸ್ನಲ್ಲಿ 90 ಐಸಿಯು ಬೆಡ್ ಮತ್ತು 52 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಇದೆ
- ಜಿಲ್ಲೆಯಲ್ಲಿ 12-14 ವಯಸ್ಸಿನವರಿಗೆ ಕೋವಿಡ್ ಲಸಿಕೆ ಮೊದಲನೇ ಡೋಸ್ ಶೇ.110 ಮತ್ತು ಎರಡನೇ ಡೋಸ್ ಶೇ.86 ನೀಡಲಾಗಿದೆ
- 15-17 ವಯಸ್ಸಿನವರಿಗೆ ಮೊದಲನೇ ಡೋಸ್ ಶೇ.86, ಎರಡನೇ ಡೋಸ್ ಶೇ.97 ನೀಡಲಾಗಿದೆ
- 18+ ಮೊದಲನೇ ಡೋಸ್ 102, ಎರಡನೇ ಡೋಸ್ ಶೇ.99.9 ಹಾಗೂ ಮುನ್ನೆಚ್ಚರಿಕೆ ಡೋಸ್ ಶೇ.16.0 ನೀಡಲಾಗಿದೆ
- ಮುನ್ನೆಚ್ಚರಿಕೆ ಡೋಸ್ ಶೇ.100 ಸಾಧನೆಗೆ ಕ್ರಮ ವಹಿಸಲಾಗುತ್ತಿದೆ
Also read: ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಜಾರಿಯಾಯ್ತು 12 ರೂಲ್ಸ್! ಎಸ್’ಪಿ ಹೇಳಿದ್ದೇನು?













Discussion about this post