ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ತ್ಯಾಜ್ಯ ನೀರು ಸಂಸ್ಕರಣಾ ಮರುಚಾಲನಾ ಕಾಮಗಾರಿಗೆ ವೇಗ ದೊರಕಿಸಿಲು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಇಂದು ಗುಂಡಪ್ಪ ಶೆಡ್ ವೆಟ್ ವೆಲ್ ಸ್ಥಳಕ್ಕೆ ಭೇಟಿ ನೀಡಿದರು.
ತ್ಯಾವರೆ ಚಟ್ನಳ್ಳಿಯಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ತ್ಯಾಜ್ಯ ನೀರು ಪಂಪ್ ಮಾಡುವ ಮುಖ್ಯ ವೆಟ್ ವೆಲ್ ಘಟಕವಾದ ಗುಂಡಪ್ಪ ಶೆಡ್ ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದ್ದರೂ ಸಿವಿಲ್ ಕಾಮಗಾರಿ ಮಾಡಲು ಭಾರಿ ಮಳೆ ನೀರು ಹರಿಯುವಿಕೆ ತೊಡಕಾಗಿತ್ತು. ಈಗ ಉಳಿದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮುಗಿಸಿ ಇನ್ನು ಎರಡು ಮೂರು ತಿಂಗಳಲ್ಲಿ ಸಂಪೂರ್ಣ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Also read: ಬೆಂಗಳೂರು | ಜಯನಗರ ರಾಜಬೀದಿಯಲ್ಲಿ ರಾಯರ ಮಹಾರಥೋತ್ಸವ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post