ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಮ್ಯಾರಥಾನ್’ನಲ್ಲಿ ಪಾಲ್ಗೊಂಡಿದ್ದ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯಾ ಶ್ರೀನಿವಾಸ್ ಅವರು 22 ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ದಸರಾ ಉತ್ಸವದ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ರನ್ನರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್’ನಲ್ಲಿ ಯಾವುದೇ ರೀತಿಯ ವಯಸ್ಸಿನ ಬೇಧವಿರಲಿಲ್ಲ. ಎಲ್ಲ ವರ್ಗದ ಹಾಗೂ ಎಲ್ಲ ವಯೋಮಾನದ ಸ್ತ್ರೀಯರು ಪಾಲ್ಗೊಂಡಿದ್ದರು.
ಸುಮಾರು 180 ಸ್ಪರ್ಧಿಗಲ್ಲಿ ಚಿಕ್ಕ ಬಾಲಕಿಯರೂ ಸೇರಿದಂತೆ ಎಲ್ಲ ವಯೋಮಾನದವರು ಭಾಗವಹಿಸಿದ್ದರು. ಇದರಲ್ಲಿ ಡಾ.ವಿನಯಾ ಶ್ರೀನಿವಾಸ್ ಅವರು 22 ಸ್ಥಾನ ಗಳಿಸಿದ್ದು, ಇವರಿಗೆ ಕಾಲೇಜಿನ ಪ್ರಮುಖರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post