ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ದೇಶ ಎನ್ನುವುದು ಕೇವಲ ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ. ಇದು ಒಂದು ಭಾವನಾತ್ಮಕ ವಿಚಾರವಾಗಿದೆ ಎಂದು ಆರ್’ಜಿಯುಎಚ್’ಎಸ್ ಸೆನೆಟ್ ಸದಸ್ಯ, ಎಂಎಲ್’ಸಿ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.
ನೇತಾಜಿ ಸುಭಾಷಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪರಾಕ್ರಮ ದಿವಸದಲ್ಲಿ ಅವರು ಮಾತನಾಡಿದರು.
75 ವರ್ಷದಲ್ಲಿ ನಮಗೆ ಸ್ವಾತಂತ್ರ ಹೇಗೆ ಬಂದಿತು ಎಂಬ ವಿಚಾರಗಳೇ ಮರೆತು ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಇಂದಿನ ಪೀಳಿಗೆಗೆ ಸ್ವಾತಂತ್ರ ಹೋರಾಟದ ಘಟನೆಗಳೇ ಮರೆತುಹೋಗಿವೆ. ಮಾತ್ರವಲ್ಲ ನಮಗಾಗಿ ಪ್ರಾಣತ್ಯಾಗ ಮಾಡಿದ ನಾಯಕರ ಹೆಸರುಗಳೇ ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯಲ್ಲಿಯೇ ಈಸೂರು ಎಂಬ ಸಣ್ಣ ಗ್ರಾಮ ದೇಶದಲ್ಲೇ ಮೊದಲ ಬಾರಿಗೆ ಸ್ವಾತಂತ್ರ ಘೋಷಿಸಿಕೊಂಡ ಹಳ್ಳಿ. ಇಲ್ಲಿ ಹೋರಾಟ ಮಾಡಿದ ಮಹಿಳೆಯರಿಗೂ ಸಹ ಗಲ್ಲು ಶಿಕ್ಷೆಯಾಗಿತ್ತು. ನಮ್ಮ ಶಿವಮೊಗ್ಗದಲ್ಲಿ ಪ್ರಹ್ಲಾದ ಶೆಟ್ಟಿ ವೃತ್ತ ಎಂಬ ವೃತ್ತವೊಂದಿದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಜೈಲಿನಲ್ಲೇ ಮರಣಹೊಂದಿಗೆ ಮೊದಲ ವ್ಯಕ್ತಿ ಇವರು. ಇವರ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆ ಎಂದು ಪ್ರಶ್ನಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ ಯಾವಾಗ ಬಂತು ಎಂದರೆ ಎಲ್ಲರಿಗೂ ತಿಳಿದಿದೆ. ಆದರೆ, ಮೊದಲ ಬಾರಿಗೆ ಸ್ವಾತಂತ್ರ ಕಳೆದುಕೊಂಡಿದ್ದು ಯಾವಾಗ ಎಂದರೆ ಯಾರಿಗಾದರೂ ತಿಳಿದಿದೆಯೇ. ಇದು ಬಹಳಷ್ಟು ಮಂದಿಗೆ ಈ ವಿಚಾರ ತಿಳಿದಿಲ್ಲ. ಆ ಸಂದರ್ಭದಲ್ಲೂ ಸಹ ಬಹಳಷ್ಟು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ವಿಚಾರಗಳ ಕುರಿತಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸುಭಾಷ್ ಚಂದ್ರಬೋಸ್ ಅವರು ಅಂದಿನ ಕಾಲದಲ್ಲಿ ಅತ್ಯಂತ ಕಠಿಣವಾಗಿದ್ದ ಐಸಿಎಸ್ ಪರೀಕ್ಷೆ ಪಾಸು ಮಾಡಿದ್ದತಂಹ ಸಾಧಕ. ಇವರಂತೆಯೇ ಸುಖದೇವ್, ರಾಜಗುರು, ಭಗತ್ ಸಿಂಗ್ ಸೇರಿದಂತೆ ಹಲವರು ಪ್ರಾಣತ್ಯಾಗ ಮಾಡಿದ್ದು, ನಮ್ಮ ದೇಶದ ಗುಲಾಮಗಿರಿಯನ್ನು ಹೋಗಲಾಡಿಸಲು ಹೋರಾಟ ಮಾಡಿ, ಪ್ರಾಣತ್ಯಾಗ ಮಾಡಿದ್ದಾರೆ ಎಂದರು.
ನಾವು ಇಂದು ಸ್ವಾತಂತ್ರವನ್ನು ಅನುಭವಿಸುತ್ತಿದ್ದೇವೆ. 1947ರಲ್ಲಿ ಸ್ವಾತಂತ್ರ ಪಡೆದ ನಂತರವೂ ಸಹ ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮತ್ತೊಂದು ರೀತಿಯಲ್ಲಿ ಸ್ವಾತಂತ್ರವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿತ್ತು. ಆ ವೇಳೆಯಲ್ಲಿ ನಾನು ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಜಿಲ್ಲೆ ಹಾಗೂ ಸೆಂಟ್ರಲ್ ಜೈಲುಗಳಲ್ಲಿ ಶಿಕ್ಷೆ ಅನುಭವಿಸುವ ಅವಕಾಶ ಒದಗಿತ್ತು. ಅದು ನನಗೆ ಹೆಮ್ಮೆಯ ಸಂಗತಿ ಎಂದರು.
Also read: ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅಗತ್ಯ ಬಂಡವಾಳ ತೊಡಗಿಸಿ
ನೇತಾಜಿ ಅವರ ಸಾವಿನ ಕುರಿತಾಗಿ ಇಂದಿಗೂ ಸತ್ಯ ಇಂದಿಗೂ ನಿಗೂಢವಾಗಿದೆ. ಅದು ಹೊರಬೀಳಬೇಕಿದೆ. ಇವರುಗಳ ತ್ಯಾಗವನ್ನು ಇಂದಿನ ಪೀಳಿಗೆ ಅರಿಯಬೇಕು ಎಂದು ಕರೆ ನೀಡಿದರು.
ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ನಮ್ಮ ಕಾಲದಲ್ಲಿ ರಾಷ್ಟç ಭಕ್ತಿ ಎನ್ನುವುದು ಪಠ್ಯದ ಭಾಗವಾಗಿತ್ತು. ಹೀಗಾಗಿ, ಅಲ್ಲಿಂದಲೇ ನಮ್ಮಲ್ಲಿ ಜಾಗೃತಿ ಮೂಡುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದ್ದು, ಇದನ್ನು ಬದಲಾವಣೆ ಮಾಡಲು ಶಾಲಾ ಕಾಲೇಜುಗಳಲ್ಲಿ ಮಹನೀಯರ ಜನ್ಮದಿನಗಳಲ್ಲಿ ಆಚರಣೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಗಳು ಆಗಬೇಕು. ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತವನ್ನು ಪರ್ಯಾಯವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ತೀರಾ ಅವಶ್ಯಕತೆಯಿರುವ ರಕ್ತವನ್ನು ಅರ್ಹರು ದಾನ ಮಾಡಬೇಕು. ರಕ್ತದಾನದಿಂದ ಹೃದಯಾಘಾತ, ಹೃದಯ ಸಂಬAಧಿ ಕಾಯಿಲೆಗಳ ಸಾಧ್ಯತೆ ಕಡಿಮೆ ಎಂದರು.
ಆರ್’ಎಸ್’ಎಸ್ ಪ್ರಮುಖ ಭಾನುಪ್ರಕಾಶ್, ಕಾಲೇಜಿನ ಡೀನ್ ಡಾ.ಕೃಷ್ಣಪ್ರಸಾದ್, ಉಪಪ್ರಾಂಶುಪಾಲ ಡಾ.ಸಿದ್ಧಲಿಂಗಪ್ಪ, ಡಾ.ಗೌತಮ್, ಡಾ. ಮಲ್ಲಾರಾಧ್ಯ, ಡಾ.ರಮೇಶ್, ಡಾ.ವಿನೀತ್ ಆನಂದ್ ಸೇರಿದಂತೆ ವೈದ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post