ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಇದರ ಜೊತೆಗೆ ನಮ್ಮ ಭೂಮಿಯ ಮಣ್ಣು ರಾಸಾಯನಿಕ ಗೊಬ್ಬರಗಳಿಂದ, ವಿಷ ಅನಿಲಗಳಿಂದ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪ್ರಸ್ತುತ ಶೇಕಡ ಎಷ್ಟು ಭಾಗ ಮಾಲಿನ್ಯವಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ ಎಂದು ಮಾಜಿ ಸೈನಿಕ ಸಂಘದ ಅಧ್ಯಕ್ಷರು ತಿಳಿಸಿದರು.
ಇಂದು ಜೈನ್ ಶಾಲೆಯಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ “ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ” ವಿಷಯದ ಅಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಮಾಜಿ ಸೈನಿಕ ಸಂಘದ ಸದಸ್ಯರು 55 ಸಸಿಗಳನ್ನು ಶಾಲೆಗೆ ನೀಡಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಉದ್ಘಾಟಿಸಲಾಯಿತು. ಹಾಗೆಯೇ ವಿದ್ಯಾರ್ಥಿಗಳ ಕೈಯಿಂದ ಸಸಿಗಳನ್ನು ನೆಡಿಸಲಾಯಿತು.
ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ಸಂದೇಶದೊಂದಿಗೆ ಜೈನ್ ಶಾಲೆಯಲ್ಲಿ ತಯಾರಿಸಿದ 500 ಪರಿಸರ ಸ್ನೇಹಿ ಕೈ ಚೀಲವನ್ನು ನೀಡಿದರು.
Also read: ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಇಲಾಖೆ ಕೊಟ್ಟ ಗುಡ್ ನ್ಯೂಸ್ ಏನು?
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಸಂಯೋಜಕರು ದಿವ್ಯ ಶೆಟ್ಟಿ , ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕರು ವಿಜಯಕುಮಾರ್, ಶಿಕ್ಷಕರು, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













Discussion about this post