ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃಷಿ, ತೋಟಗಾರಿಕೆ ಹಾಗೂ ಗೋ ಹತ್ಯೆ ನಿಷೇಧದ ಬಗ್ಗೆ ಸುಧೀರ್ಘ ಚರ್ಚೆಗೆ ಇಂದಿನ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆ #KDP Meeting ಸಾಕ್ಷಿಯಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ #Madhu Bangarappa ಅಧ್ಯಕ್ಷತೆಯನ್ನು ವಹಿಸಿದ್ದ ಈ ಸಭೆಯ ಆರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ರೈತರಿಗೆ ನಿಗಧಿತ ಸಮಯದಲ್ಲಿ ಸೌಲಭ್ಯಗಳು ದೊರಕದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಿಗಧಿತ ಸಮಯದಲ್ಲಿ ಕೆಡಿಪಿ ಸಭೆಯನ್ನೇ ಕರೆಯದೇ ರೈತರಿಗೆ ಹೇಗೆ ಸೌಲಭ್ಯ ಒದಗಿಸುತ್ತೀರಿ ಎಂದು ಆಕ್ರೋಶ ಭರಿತವಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ ಕಳೆದ ಕೆಡಿಪಿ ಸಭೆ ಕರೆಯುವ ಸಂದರ್ಭದಲ್ಲಿಯೇ ಚುನಾವಣೆ ಪ್ರಕಟಗೊಂಡಿದ್ದರಿಂದ ಅಂದಿನ ಸಭೆಯನ್ನು ಮುಂದೂಡಲಾಯಿತು. ಅದಕ್ಕೆ ಬೇರೆ ಯಾವ ಕಾರಣವೂ ಇಲ್ಲ ಅಂದ ಅವರು ಇಲ್ಲಿಯವರೆಗೆ 68 ಕೋಟಿ ರೂ. ಬೆಳೆ ವಿಮೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಈ ಕುರಿತು ರಾಜೀವ್ ಗಾಂಧಿ #Rajeev Gandhi ವಸತಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ಉತ್ತರ ಬಂದ ತಕ್ಷಣ ಪರಿಹಾರ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಿಸಿ ಅಧಿಕೃತ, ಅನಧಿಕೃತ ಎಂಬ ವಿಂಗಡಣೆ ಸಲ್ಲ, ಇದಕ್ಕೆ ಸಂಬಂಧಿಸಿದ ಸರ್ಕಾರದ ಮಾರ್ಗದರ್ಶಿ ಇನ್ನೂ ಬದಲಾವಣೆಯಾಗಿಲ್ಲ. ಆದ್ದುದರಿಂದ ಸಂತ್ರಸ್ಥರಿಗೆ ಪರಿಹಾರ ನೀಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

Also read: Union Minister H.D. Kumaraswamy to visit Bhadravathi VISL Plant on Sunday
ಬೆಳೆ ವಿಮೆಗೆ ಸಂಬಂಧಿಸಿದಂತೆ ಶಾಸಕ ಅರಗಜ್ಞಾನೇಂದ್ರ #Araga Gnanendra ವಿಷಯ ಪ್ರಸ್ತಾಪಿಸಿ ತಮ್ಮ ತಾಲ್ಲೂಕಿನಲ್ಲಿ ಯಾವುದೇ ಮಳೆ ಮಾಪಾಕವು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ನೀವು ಬೆಳೆ ವಿಮೆ ಹೇಗೆ ಅಂದಾಜು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 3583 ರೈತರಿಗೆ ಬೆಳೆ ವಿಮೆ ಬಾಕಿ ಇದೆ ಎಂದು ತಿಳಿಸಿದರು.
ಅಡಿಕೆ ಬೆಳೆ ಸುಧೀರ್ಘ ಬೆಳೆಯಾಗಿದ್ದು, ತಮ್ಮ ಪಹಣಿಯ ಕಾಲಂನಲ್ಲಿ ಅಡಿಕೆ ಬೆಳೆಯ ಉಲ್ಲೇಖವೇ ನಾಪತ್ತೆಯಾಗಿರುವ ವಿಷಯವನ್ನು ಸಭೆ ಗಮನಕ್ಕೆ ತಂದರು. ಸುಧೀರ್ಘ ಬೆಳೆಗಳಿಗೆ ಪ್ರತಿವರ್ಷ ಬೆಳೆ ನಮೂದು ಮಾಡುವ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ ನಡೆಯುತ್ತಿದೆ. ಗೋಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟರು, ಹಿಡಿದುಕೊಟ್ಟವರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಹಸುಗಳ ಮಾರಣಹೋಮವನ್ನು ನಿಲ್ಲಿಸುವ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು, ಮಧ್ಯಪ್ರವೇಶಿಸಿ ಇತ್ತೀಚಿಗೆ ನಡೆದ ಬಕ್ರೀದ್ ಹಬ್ಬದಲ್ಲಿ ಯಾವುದೇ ಹಸುವನ್ನು ಹತ್ಯೆಗೈಯ್ಯಲ್ಲಿಲ್ಲ. ಅತ್ಯಂತ ಶಾಂತಿಯುತವಾಗಿಯೇ ಹಬ್ಬವನ್ನು ಆಚರಿಸಲಾಗಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದಾಗ ಎಸ್.ಎನ್. ಚನ್ನಬಸಪ್ಪನವರು ತಮ್ಮ ಮೊಬೈಲ್‍ನಲ್ಲಿದ್ದ ಗೋಹತ್ಯೆ ಸಂಬಂಧಿಸಿದ ವೀಡಿಯೋ ಮತ್ತು ಪೋಟೋಗಳನ್ನು ತೋರಿಸಿ ಹಾಗಾದರೆ ಇದು ಸುಳ್ಳೇ ಎಂದು ಕುಟುಕಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕÀ ಸಂಗಮೇಶ್, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್‍ಗೌಡ, ಜಿ.ಪಂ. ಸಿ.ಇ.ಓ. ಸುಧಾಕರ್ ಸ್ನೇಹಲ್ ಲೋಖಂಡೆ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post