ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಎನ್ಟಿ ಕಾಲೋನಿಯ ಹಳೆ ರೈಲ್ವೆ ಗೇಟ್ ಬಳಿ ಹಸುಗಳ ಮಾರಣಾಂತಿಕ ಸಾವಿಗೆ ಕಾರಣವಾದ ಸ್ಥಳಕ್ಕೆ ಇಂದು ಬೆಳಿಗ್ಗೆ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ #MLA Channabasappa ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಘಟನೆಗೆ ಕಾರಣವಾದ ಅಸುರಕ್ಷಿತ ಪರಿಸ್ಥಿತಿಗಳು ಹಾಗೂ ತೊಂದರೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
Also read: ಮಂಡ್ಯ ಜನರು – ನನ್ನ ನಡುವೆ ಹುಳಿ ಹಿಂಡುವ ವ್ಯರ್ಥ ಪ್ರಯತ್ನ ಬೇಡ | ಹೆಚ್ಡಿಕೆ ತಿರುಗೇಟು
ಸ್ಥಳದಲ್ಲಿರುವ ರೈಲ್ವೆ ಕ್ರಾಸಿಂಗ್ನಲ್ಲಿ ಸುರಕ್ಷತೆ ಹೆಚ್ಚಿಸುವ ಸಲುವಾಗಿ ಅಗತ್ಯ ಎಚ್ಚರಿಕಾ ಸಂಕೇತಗಳು, ಬ್ಯಾರಿಕೇಡ್ಗಳು ಹಾಗೂ ಬೆಳಕಿನ ವ್ಯವಸ್ಥೆ ಸುಧಾರಣೆಗೊಳಿಸುವಂತೆ ಸೂಚಿಸಲಾಯಿತು.
ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಪುನರಾವೃತ್ತಿಯಾಗದಂತೆ ನಿರಂತರ ನಿಗಾ ಮತ್ತು ತಪಾಸಣೆ ನಡೆಸಲು ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post