ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯಂತ ಅಗತ್ಯದ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಸಮಾಜದ ಚಟುವಟಿಕೆಗಳ ಎಲ್ಲಾ, ಸ್ತರಗಳಲ್ಲಿ ನಮ್ಮ ಸೃಜನಶೀಲತೆ ಅತಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಜ್ಞಾನ ವಿಜ್ಞಾನ ಹಾಗೂ ಸೃಜನಶೀಲತೆ ಒಂದಕ್ಕೊಂದು ಹೊರತಾಗಿಲ್ಲ, ಪೂರಕವಾಗಿವೆ. ಆದರೆ ಸೃಜನಶೀಲತೆ ಕಲಿಕೆಯಿಂದ ಬರುವಂತಹದಲ್ಲ. ಸ್ವ ಮನಸಿನ ವೈಯುಕ್ತಿಕವಾದ ಅಂಶಗಳಿಂದ ಹೊರಬರುತ್ತದೆ ಎಂದು ಕನ್ನಡ ಮೀಡಿಯಂ 27×07 ವಾಹಿನಿಯ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಅವರು ಅನುಪಿನ ಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ರಂಗಭೂಮಿ, ಸಾಹಿತ್ಯ, ನಿರೂಪಣೆ, ಭಾಷಣ ಸೇರಿದಂತೆ ಎಲ್ಲಾ ಕಲಾತ್ಮಕ ಚಟುವಟಿಕೆಗಳಿಗೆ ಸೃಜನಶೀಲತೆ ಕಾರಣವಾಗಿದೆ. ಈ ಮೂರೂ ಅಂಶಗಳನ್ನು ಮುಂದಿಟ್ಟುಕೊಂಡು ಮಕ್ಕಳಲ್ಲಿ ಇರುವಂತಹ ಸೃಜನಶೀಲತೆಯನ್ನು ಗುರುತಿಸುವ ಇಂತಹ ಕಾರ್ಯಕ್ರಮ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.
ನಮ್ಮಲ್ಲಿ ನಾವು ಸೃಜನಶೀಲತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕಬೇಕಾಗಿದೆ ಎಂದು ಮಕ್ಕಳಿಗೆ ಕಥೆಯೊಂದರ ಮೂಲಕ ವಿವರಿಸಿದ ಅವರು ಅಂತಹ ಶಕ್ತಿ ನಮ್ಮಲ್ಲಿಯೇ ಇರುತ್ತದೆ. ಅದನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
Also read: ಶಿವಮೊಗ್ಗ: ಹೊಸಮನೆ ಬಡಾವಣೆಯ ರಾಜಕಾಲುವೆ ಕಾಮಗಾರಿಗೆ ಶಾಸಕ ಈಶ್ವರಪ್ಪ ಚಾಲನೆ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಅವರು ಆಶೀರ್ವಚನದಲ್ಲಿ ಉತ್ಕೃಷ್ಟವಾದ ಯೋಚನೆಯಿಂದ ಮಾತ್ರ ಉತ್ತಮವಾದ ಸಾಧನೆ ಹಾಗೂ ಯಶಸ್ಸು ಗಳಿಸಲು ಸಾಧ್ಯ. ನಾವು ಕಷ್ಟಗಳು ಬಂದಾಗ ಅವುಗಳಿಗೆ ಬಗ್ಗದೆ ಅಲ್ಲಿಂದ ಹೊರಬಂದು ಹೊಸತನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ನಾನು ಕುರಿಯಲ್ಲ ಸಿಂಹ ಎಂಬ ಮನೋಭಾವ ನಮ್ಮಲ್ಲಿ ಬೆಳೆದಿರಬೇಕು. ನಾವು ಯಾವ ರೀತಿ ನಮ್ಮನ್ನು ಯೋಚಿಸಿಕೊಳ್ಳುತ್ತೇವೆ ಅಂದರೆ ಭಾವಿಸುತ್ತೇವೆಯೂ ಹಾಗೆಯೇ ನಮ್ಮತನ ರೂಪಿತಗೊಳ್ಳುತ್ತದೆ ಎಂದರು.
ನಾನು ಕಂಡಂತೆ ಇಡೀ ರಾಜ್ಯ ಹಾಗೂ ದೇಶವಿದೇಶಗಳಲ್ಲಿ ಆಧ್ಯಾತ್ಮದ ಜೊತೆ ವೈಜ್ಞಾನಿಕ ಕಲಿಕೆಗೆ ಆದ್ಯತೆ ನೀಡಿದ ರಾಮಕೃಷ್ಣ ವಸತಿ ಶಾಲೆಯ ಕಾರ್ಯಕ್ರಮಗಳು ವಿಶೇಷ. ಪಾಠ ಕಲಿಯುವಾಗ ಪಾದರಕ್ಷೆ ಧರಿಸದಿರುವುದು. ಪ್ರತಿದಿನ ಕನಿಷ್ಠ ಎರಡು-ಮೂರು ಬಾರಿ ಗುರುಹಿರಿಯರನ್ನು, ತಂದೆ-ತಾಯಿಯರನ್ನು ಗೌರವಿಸುವ ಪರಿಪಾಠ ಹೇಳಿಕೊಡಲಾಗುತ್ತದೆ. ನಂಬಿಕೆ, ಪ್ರೀತಿ, ವಿಶ್ವಾಸ ತುಂಬಿದ ಈ ಶಾಲೆ ಮಕ್ಕಳ ಮನದಲ್ಲಿರಬಹುದಾದ ಅಹಂಕಾರವನ್ನು ಹತ್ತಿಕ್ಕುತ್ತದೆ. ಅಹಂಕಾರ ಇಲ್ಲದವರಿಗೆ ಮಾತ್ರ ಜ್ಞಾನ ಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ. ಡಿ. ಆರ್. ನಾಗೇಶ್ ವಹಿಸಿದ್ದು, ಕಾರ್ಯಕ್ರಮದಲ್ಲಿ ತುಂಗಾತರಂಗ ದಿನಪತ್ರಿಕೆ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ಅಂತರಾಷ್ಟ್ರೀಯ ಸ್ಪೀಕರ್ ಹಾಗೂ ಲವ್ ಟ್ರಸ್ಟ್ ನ ಸಿಇಓ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಕ್ಕಳು ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಶಿಕ್ಷಕ ರಾದವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಹಾಗೂ ಇತರರು ಇದ್ದರು. ಸುಮಾರು ಮೂರು ಸಾವಿರದಷ್ಟು ಪ್ರಾತ್ಕಕ್ಷಿಕೆಗಳನ್ನು ಮಕ್ಕಳು ಪ್ರದರ್ಶಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post