ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಂದೆ ತಾಯಿಯ ಜೊತೆಯ ಜಗಳವಾಡಿದ ದೂರ್ತ ಮಗನೊಬ್ಬ ಜನ್ಮ ಕೊಟ್ಟ ಅಮ್ಮನ ಕಪಾಳಕ್ಕೆ ಹೊಡೆದು, ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಂದ ಘಟನೆ ನಡೆದಿದೆ.
ಬುಳ್ಳಾಪುರ ಗ್ರಾಮದ ವಾಸಿ 32 ವರ್ಷದ ವ್ಯಕ್ತಿಯೇ ಈ ದುಷ್ಟ ಮಗ. ಈತ ಕುಡಿದ ಮತ್ತಿನಲ್ಲಿ ತನ್ನ ತಂದೆ ತಾಯಿಯರೊಂದಿಗೆ ಜಗಳವಾಡಿದ್ದು, ತನ್ನ 45 ವರ್ಷದ ಅಮ್ಮನ ಕಪಾಳಕ್ಕೆ ಹೊಡೆದು, ಕಾಲಿನಿಂದ ಕುತ್ತಿಗೆಯನ್ನು ತುಳಿದು ಹತ್ಯೆ ಮಾಡಿದ್ದಾನೆ.

ಮೃತೆಯ ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















