ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಮುಖ್ಯ ಶಾಖೆಯು ಐದುನೂರು ಕೋಟಿ ವ್ಯವಹಾರ ದಾಟಿರುವ ಹಿನ್ನೆಲೆ ಸಂತೋಷ ಹಂಚಿಕೊಳ್ಳುವ ಹಾಗೂ ಗ್ರಾಹಕರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಉಪಮಹಾ ಪ್ರಬಂಧಕರಾಗಿರುವ ಪಿ. ಸಂದೀಪ್ ರಾವ್ ಹಾಗೂ ಮುಖ್ಯಶಾಖೆಯ ಮುಖ್ಯ ಪ್ರಬಂಧಕ ಕೆ. ಪುಂಡಲಿಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಂದೀಪ್ ರವರು ಕೆನರಾಬ್ಯಾಂಕ್ ಬಂದಿರುವ ಹೊಸ ಹೊಸ ಯೋಜನೆಗಳನ್ನು ಹಾಗೆ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಿದರು. ಗ್ರಾಹಕರು ಕೆನರಾ ಬ್ಯಾಂಕ್ ಯೋಜನೆಗಳಿಂದ ತಮ್ಮ ಜೀವನದಲ್ಲಾದ ಖುಷಿ ಸಂಗತಿಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪ್ರಬಂಧಕರಾದ ಎಲ್. ವಿ. ಭಾರ ಹಾಗೂ ಮುಖ್ಯ ಶಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post