ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾಲ್ಯದಿಂದಲೇ ರಾಷ್ಟ್ರಾಭಿಮಾನ ಬೆಳೆಸಿಕೊಂಡು ದೇಶ ಸೇವೆಗೆ ಸದಾ ಸನ್ನದ್ಧರಾಗಿರಬೇಕು ಎಂದು ನಿವೃತ್ತ ಸೈನಿಕ ಮೇಜರ್ ಡಾ. ವಿಕ್ರಂ ಕೆದ್ಲಾಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ಆಯೋಜಿಸಲಾಗಿದ್ದ 77ನೇ ವರ್ಷದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಕುರಿತು ದೇಶವನ್ನು ಕಾಪಾಡುವಲ್ಲಿ ಸೈನಿಕರ ಮಹತ್ವದ ಬಗ್ಗೆ ತಿಳಿಸಿದರು.

ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಅದ್ದೂರಿಯಿಂದ ನೆರವೇರಿತು. ಶಾಲೆಯ ಶಕ್ತಿ , ಸಿದ್ದಾಂತ, ನಿಶ್ಚಯ ಮತ್ತು ವಿಶ್ವಾಸ್ ವಿದ್ಯಾರ್ಥಿ ತಂಡಗಳು ಹಲವು ದೇಶಭಕ್ತಿ ಗೀತೆಗಳು ಮತ್ತು ನೃತ್ಯ ಮಾಡುವ ಮೂಲಕ ಭಾರತಾಂಬೆಗೆ ನಮನ ಸಲ್ಲಿಸಿದರು.











Discussion about this post