ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೃತ್ಯ ಶಿಕ್ಷಣ ಅತೀ ಹೆಚ್ಚು ದೈಹಿಕ ಹಾಗೂ ಮಾಸಿಕ ಪರಿಶ್ರಮವನ್ನು ಬೇಡುತ್ತದೆ. ಯುವಾವಸ್ಥೆಯಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮ ಮಕ್ಕಳ ಮನಸ್ಸನ್ನು ಪ್ರಫುಲ್ಲಿವಾಗಿಡುವುದಲ್ಲದೆ ಉಳಿದೆಲ್ಲಾ ವಿಷಯದಲ್ಲೂ ಮಕ್ಕಳು ಅಗ್ರಗಣ್ಯರಾಗಲು ಸಹಾಯ ಮಾಡುತ್ತದೆ. ಅದು ಶಾಲಾ ಶಿಕ್ಷಣಕ್ಕೆ ಎಂದೂ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದಲ್ಲಿ ಸಹಚೇತನ ನಾಟ್ಯಾಲಯವು ಹ್ಮುಕೊಂಡಿದ್ದ ಭಾರತೀಯಂ ಹಾಗೂ ಅಜಿತಶ್ರೀ ಪುರಸ್ಕಾರ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Also read: ದೈಹಿಕ ಸ್ಥಿರತೆ ಕಾಪಾಡಿಕೊಳ್ಳಲು ಕನಿಷ್ಟ ಒಂದು ಗಂಟೆ ವ್ಯಾಯಾಮ ಮಾಡಿ: ಜ್ಯೋತಿಪ್ರಕಾಶ್ ಕಿವಿಮಾತು
ಹಿಂದುಳಿದ ಬಡಾವಣೆ ಹಾಗೂ ಆಯ್ದ ಸರ್ಕಾರಿ ಶಾಲಾ 130 ಮಕ್ಕಳ ದೇಶಭಕ್ತಿಗೀತೆಗಳಿಗೆ ನೃತ್ಯವನ್ನು ವೀಕ್ಷಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹಾಲಾಡಿ, ಹಿಂದುಳಿದ ಬಡಾವಣೆ ಮುಂದೊಂದು ದಿನ ಮುಂದುವರಿದ ಬಡಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಮಕ್ಕಳ ಪ್ರತಿಭಾ ಅನಾವರಣದಿಂದ ಸಾಬೀತಾಗಿದೆ. ಉದಯೋನ್ಮುಖ ಕಲಾವಿದರ ದಿಬ್ಬಣವೇ ಇಲ್ಲಿ ಸಾಗಿರುವುದು ಹೆಮ್ಮೆಯ ವಿಚಾರ. ಕನ್ನಡ ಸಂಸ್ಕೃತಿ ಇಲಾಖೆ ಇಂತಹ ಗುಣಾತ್ಮಕ ಕಾರ್ಯಗಳಿಗೆ ಸದಾ ಸಹಕಾರ ನೀಡಲು ಸಿದ್ಧವಾಗಿದೆ ಎಂದರು.

ಅಜಿತಶ್ರೀ ಪುರಸ್ಕಾರನ್ನು ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಮೂರ್ತಿಯವರು ಅಜಿತರ ಸಮಾಜಮುಖಿ ಜೀವನ ಹಾಗೂ ಹಿಂದೂ ಸೇವಾ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿದ ರೀತಿ ಬೆರಗನ್ನುಂಟು ಮಾಡುತ್ತದೆ. ಆತ ಕೇವಲ ವ್ಯಕ್ತಿಯಾಗಿರಲಿಲ್ಲ ಸಮಾಜದ ಶಕ್ತಿಯಾಗಿದ್ದರು ಎಂದರು.

ನೃತ್ಯಗುರು ಸಹನಾ ಚೇತನ್ ಸ್ವಾಗತಿಸಿದರು, ನಾಗಮಣಿ ಆನಂದ್ ನಿರೂಪಿಸಿದರು, ಎಸ್. ಚೇತನ್ ವಂದಿಸಿದರು.










Discussion about this post