ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಡಹಬ್ಬ ಶಿವಮೊಗ್ಗ ದಸರಾ ಸೆ.22ರಿಂದ ಆರಂಭವಾಗಲಿದ್ದು, ಈ ಬಾರಿ ಸ್ಯಾಂಡಲ್’ವುಡ್ ಖ್ಯಾತ ನಟ, ನಟಿಯರು ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸೆ.24ರಿಂದ ಮೂರು ದಿನಗಳ ಕಾಲ ಚಲನಚಿತ್ರ ಪ್ರದರ್ಶನ ನಡೆಯಲಿದ್ದು, ಇನ್ನುಳಿದ ಕೆಲವು ದಿನಗಳು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಚಲನಚಿತ್ರ ದಸರಾದಲ್ಲಿ ಮೂರು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.
ಯಾವತ್ತು, ಯಾವ ಸಿನಿಮಾ ಪ್ರದರ್ಶನ?(ವೀರಭದ್ರೇಶ್ವರ ಚಿತ್ರಮಂದಿರ)
- ಸೆಪ್ಟೆಂಬರ್ 25: ಬೆಳಿಗ್ಗೆ 9:30ಕ್ಕೆ ತಲೆದಂಡ
- ಸೆಪ್ಟೆಂಬರ್ 26: ಬೆಳಿಗ್ಗೆ 9:30ಕ್ಕೆ ಜೀನಿಯಸ್ ಮುತ್ತ
- ಸೆಪ್ಟೆಂಬರ್ 27: ಬೆಳಿಗ್ಗೆ 9:30ಕ್ಕೆ ಗರುಡ ಗಮನ ವೃಷಭ ವಾಹನ
ಯಾವತ್ತು, ಯಾವ ನಟ, ನಟಿ ಬರ್ತಾರೆ?
- ಸೆಪ್ಟೆಂಬರ್ 24: ಚಲನಚಿತ್ರ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ನಟ ಶರಣ್, ನಟಿ ಕಾರುಣ್ಯ ರಾಮ್, ಚಿತ್ರ ನಿರ್ದೇಶಕ
- ಸಾಯಿ ಪ್ರಕಾಶ್ ಹಾಗೂ ನಟಿ ಮತ್ತು ನಿರ್ದೇಶಕಿ ರೂಪಾ ಅಯ್ಯರ್ ಭಾಗಿ
- ಸೆಪ್ಟೆಂಬರ್ 26: ನಗೆ ಹಬ್ಬದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಭಾಗಿ
- ಸೆಪ್ಟೆಂಬರ್ 28: ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಭಾಗಿ. ಇದೇ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕರಾದ ಹೇಮಂತ್ ಕುಮಾರ್ ಅನುರಾಧ ಭಟ್ ಸರಿಗಮಪತಂಡ ಹಾಗೂ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದ ಕಲಾವಿದರು ಕೂಡ ಇರಲಿದ್ದಾರೆ
- ಸೆಪ್ಟೆಂಬರ್ 30: ನಟಿ ಗೀತಾ ಅವರು ಕಾರ್ಯಕ್ರಮವೊಂದನ್ನು ಉದ್ಘಾಟಿಸಲಿದ್ದಾರೆ
- ಅಕ್ಟೋಬರ್ 1: ನಟಿ ಹರ್ಷಿಕಾ ಪೂಣಚ್ಚ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಹೀಗಿದೆ ಶಿವಮೊಗ್ಗ ದಸರಾ ಕಾರ್ಯಕ್ರಮಗಳ ಪಟ್ಟಿ
ಸೆ.23ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷಸಂಭ್ರಮ ನಡೆಯುತ್ತದೆ. ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಹಾಗೂ ಅಂತರಾಷ್ಟ್ರೀಯ ನೃತ್ಯಗಾರ್ತಿ ಕು. ಋತುಸ್ಪರ್ಶ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸೆ.24ರ ಬುಧವಾರ ನಡೆಯಲಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟರುಗಳಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಮುಂತಾದವರು ಭಾಗವಹಿಸಲಿದ್ದಾರೆ.
ಸೆ.25ರಂದು ರೈತ ದಸರಾ, ಕಲಾ ದಸರಾ ನಡೆಯಲಿದೆ. ಸೆ.26ರಂದು ಕಲಾ ದಸರಾ ಕಾರ್ಯಕ್ರಮ ಸಂಜೆ 6 ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವರಪುರ ಉದ್ಘಾಟಿಸುವರು.
ಸೆ.26ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್. ರವಿಕುಮಾರ್ ಉದ್ಘಾಟಿಸುವರು.ಸೆ.28ರಂದು ಯೋಗದಸರಾ ಗಮಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದ್ದು, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ನಿರ್ದೇಶಕ ಎನ್. ರವಿಕುಮಾರ್ ಭಾಗವಹಿಸುವರು.
ಸೆ.28ರಂದು ಸಂಜೆ 5 ಗಂಟೆಗೆ ಅಲ್ಲಮಪ್ರಭು(ಫ್ರೀಡಂಪಾರ್ಕ್) ಮೈದಾನದಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದ್ದು, ಖ್ಯಾತ ನಟ ಡಾ. ಶಿವರಾಜ್‍ಕುಮಾರ್ ಭಾಗವಹಿಸುವರು. ಇವರ ಜೊತೆಗೆ ಸಚಿವ ಮಧುಬಂಗಾರಪ್ಪ ಕೂಡ ಉಪಸ್ಥಿತರಿರುತ್ತಾರೆ. ಅಂದು ಅಲ್ಲಿ ಆಹಾರ ಮೇಳ ಕೂಡ ಇರುತ್ತದೆ.
ಸೆ.29ರಂದು ಬೆಳಿಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ನಡೆಯಲಿದೆ. ಹಾಗೆಯೇ ಸಂಜೆ 6 ಗಂಟೆಗೆ ಗೀತ ನೃತ್ಯವೈಭವ ಕಾರ್ಯಕ್ರಮ, ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮುಂತಾದವರು ಭಾಗವಹಿಸುವರು.
ಸೆ.30ರಂದು ಕಲಾ ಮತ್ತು ಜ್ಞಾನ ದಸರಾ ಕುವೆಂಪು ರಂಗಮಂದಿರದಲ್ಲಿ, ಅಡುಗೆ ಮಾಡುವ ಸ್ಪರ್ಧೆ ವೀರಶೈವ ಕಲ್ಯಾಣ ಮಂಟಪದಲ್ಲಿ, ಸಂಜೆ 5.30ಕ್ಕೆ ಫ್ರೀಡಂಪಾರ್ಕ್‍ನಲ್ಲಿ ನಾದವೈಭವ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಚಲನಚಿತ್ರ ನಟಿ ಗೀತಾ ಇದರಲ್ಲಿ ಭಾಗವಹಿಸುತ್ತಾರೆ.ಅ.1ರಂದು ಸಂಜೆ 5 ಗಂಟೆಗೆ ಇಲ್ಲಿಯೇ ನಡೆಯುವ ನಾಟ್ಯವೈಭವ ಕಾರ್ಯಕ್ರಮದಲ್ಲಿ ನಟಿ ಹರ್ಷಿತಾ ಪೂರ್ಣಚ್ಚ ಆಗಮಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್. ಈಶ್ವರಪ್ಪ ಭಾಗವಹಿಸಲಿದ್ದಾರೆ. ಅ.2ರಂದು ಸಂಜೆ 5ಗಂಟೆಗೆ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ.
ಅ.2ರಂದು ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭವಾಗುತ್ತದೆ. ಅಂಬಾರಿ ಮೆರವಣಿಗೆಯಲ್ಲಿ ಈ ಬಾರಿ ಮೂರು ಆನೆಗಳಾದ ಸಾಗರ್, ಬಾಲಣ್ಣ, ಕುಂತಿ ಭಾಗವಹಿಸಲಿದ್ದು, ಸಾಗರ್ ಅಂಬಾರಿ ಹೋರಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ನಂತರ ಸಂಜೆ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವಿ.ಎಸ್. ರಾಜೀವ್ ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಸಿಡಿಮದ್ದು ಮತ್ತು ರಾವಣ ದಹನವನ್ನು ಏರ್ಪಡಿಸಲಾಗಿದೆ. ಸಚಿವರುಗಳಾದ ಮಧುಬಂಗಾರಪ್ಪ ಹಾಗೂ ಶಿವರಾಜ್ ಎಸ್. ತಂಗಡಗಿ, ಬಿ.ಎಸ್. ಸುರೇಶ್, ರಹೀಂಖಾನ್ ಭಾಗವಹಿಸುವರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post