ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ದತ್ತಾಂಶಗಳ ನಿರ್ವಹಣೆಯಲ್ಲಿ ಭದ್ರತೆ ಮತ್ತು ಗೌಪ್ಯತೆಯ ಕಾಳಜಿಗಳನ್ನು ಒಮ್ಮೆಲೆ ನಿರ್ವಹಿಸುವುದು ಕಷ್ಟಕರವಾದ ಸಂಗತಿಯಾಗಿದೆ ಎಂದು ಬೆಂಗಳೂರಿನ ಸಿಎಸ್‌ಐಆರ್ ಹಿರಿಯ ಪ್ರಧಾನ ವಿಜ್ಞಾನಿ ಡಾ.ಜಿ.ಕೆ. ಪಾತ್ರ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಮತ್ತು ಐಈಟಿಇ ಶಿವಮೊಗ್ಗ ವತಿಯಿಂದ ಏರ್ಪಡಿಸಿದ್ದ ವೆಬಿನಾರ್ ಸರಣಿಯಲ್ಲಿ ‘ವೆಹಿಕ್ಯುಲಾರ್ ಮತ್ತು ಪ್ಲೈಯಿಂಗ್ ಅದಾಕ್ ನೆಟ್‌ವರ್ಕ್ ನಲ್ಲಿ ಭದ್ರತೆ ಮತ್ತು ಗೌಪ್ಯತೆಯ ಕಾಳಜಿ’ ಕುರಿತು ಅವರು ಮಾತನಾಡಿದರು.
ನಮ್ಮ ವೈಯುಕ್ತಿಕ ದತ್ತಾಂಶಗಳಿಗೆ ಪಾಸ್‌ವರ್ಡನಂತಹ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದರೇ ಆನ್ಲೈನ್ ಮೂಲಕ ನಡೆಸುವ ಹಲವಾರು ವರ್ಗಾವಣೆಗಳಲ್ಲಿ ಭದ್ರತೆ ಮತ್ತು ಗೌಪ್ಯತೆಗಳ ಒಮ್ಮೆಲೆ ನಿರ್ವಹಣೆಯಲ್ಲಿ ವ್ಯತ್ಯಯಗಳಾಗುತ್ತಿದೆ. ನೂತನ ಮಾಹಿತಿ ತಂತ್ರಜ್ಞಾನ ಕಾಯ್ದೆಯು ಇಂತಹ ಹಲವಾರು ವ್ಯತ್ಯಯಗಳನ್ನು ಸರಿಪಡಿಸಿ ಮತ್ತಷ್ಟು ಭದ್ರತಾ ತಂತ್ರಜ್ಞಾನಗಳನ್ನು ಅನುಷ್ಟಾನಗೊಳಿಸಲು ಪರಿಣಾಮಕಾರಿಯಾಗಿ ನಿಲ್ಲಲಿದೆ. ವೆಹಿಕ್ಯುಲರ್ ನೆಟ್‌ವರ್ಕ್ ತಂತ್ರಜ್ಞಾನ ಕೃತಕ ಬುದ್ಧಿವಂತ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದಾಗಿ ಉನ್ನತ ಮಟ್ಟದ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆ ಸಾಧ್ಯವಾಗಲಿದೆ ಎಂದರು.
ತಂತ್ರಜ್ಞಾನಗಳ ಸಂಶೋಧನೆಯಲ್ಲಿ ನಾವು ಬಳಸುವ ವಾಹನಗಳ ಹಲವು ಮಾರ್ಪಾಡುಗಳ ಅವಶ್ಯಕತೆಯಿದೆ. ಭಾರಿ ಸಂವಹನ ಸಾಧನಗಳು, ದತ್ತಾಂಶ ಸಂಗ್ರಹಣಾ ವ್ಯವಸ್ಥೆ, ತಂತಿ ರಹಿತ ಸಂವಹನೆಗಳನ್ನು ವಾಹನಗಳಲ್ಲಿ ನಿಯೋಜಿಸುವುದರ ಮೂಲಕ ಸಂಚಾರ ವ್ಯವಸ್ಥೆಯನ್ನು ಸ್ವಯಂ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ.ಪಿ ಅಧ್ಯಕ್ಷತೆ ವಹಿಸಿದ್ದರು. ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ. ಸತ್ಯನಾರಾಯಣ, ಕಾರ್ಯಕ್ರಮದ ಸಂಯೋಜಕರಾದ ಶ್ವೇತಾ.ಬಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವೆಬಿನಾರ್ ಸರಣಿಯಲ್ಲಿ ಚೈನ್ ಮ್ಯಾನೇಜ್ಮೆಂಟ್, ಬ್ಲಾಕ್ ಚೈನ್ ತಂತ್ರಜ್ಞಾನ, ಕಾಂಪ್ಯೂಟಿಂಗ್ ಟ್ರೆಂಡ್ಸ್ ಮತ್ತು ಸೂಪರ್ ಕಂಪ್ಯೂಟರ್, ಡೇಟಾ ಅನಾಲಿಸಿಸ್ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಸಿ-ಡಾಕ್ ಎಸ್.ಡಿ.ಓ.ಎಸ್ ಜಂಟಿ ನಿರ್ದೇಶಕಿ ಎಂ.ಜಿ. ದಿವ್ಯ, ರೋಬರ್ಟ ಬಾಷ್ ಕಂಪನಿಯಲ್ಲಿ ಹಿರಿಯ ಸಂಶೋಧನಾ ಎಂಜಿನಿಯರ್ ಸಂದೀಪ ಕುಮಾರ್ ಈ ಉಪನ್ಯಾಸ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post