ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಜಯಕರ್ನಾಟಕ ಸಂಘಟನೆ ಬೆಳೆಸುವಲ್ಲಿ ಪ್ರಮುಖರಾಗಿದ್ದ ನಾಗರತ್ನಮ್ಮ ಮುರಳೀಧರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಗರತ್ನಮ್ಮ ಅವರು ಹಿರಿಯ ಪತ್ರಕರ್ತ ಎಸ್.ಎ. ಮುರಳೀಧರ್ ಅವರ ಧರ್ಮಪತ್ನಿಯಾಗಿದ್ದು, ಶಿವಮೊಗ್ಗದಲ್ಲಿ ಸಂಘಟನೆ ಬೆಳೆಸುವಲ್ಲಿ ಶಮವಹಿಸಿ, ಪ್ರಾಮಾಣಿಕ ಪ್ರಯತ್ನ ಮಾಡಿರುವ ದಿಟ್ಟ ಮಹಿಳೆಯಾಗಿದ್ದರು. ಹಾಗೂ ಸಂಘಟನೆಗೆ ಮಹಿಳಾ ಕಾರ್ಯಕರ್ತರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್, ಮಹಿಳಾ ಅಧ್ಯಕ್ಷೆ ನಾಜೀಮಾ, ಜಿಲ್ಲಾ ಉಸ್ತುವಾರಿ ಆರ್. ಹರೀಶ್, ರಾಜ್ಯಾಧ್ಯಕ್ಷ ಡಾ. ಜಗದೀಶ್ ಮೃತ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post