ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಚಾರಣಾಧೀನ ಖೈದಿಯಾಗಿ ಶಿವಮೊಗ್ಗ ಕಾರಾಗೃಹದಲ್ಲಿ ಬಂಧಿಯಾಗಿರುವ ಜಬೀವುಲ್ಲಾ ಯಾನೆ ಜಬೀ ತಂದೆ ಸಿಗ್ಬತುಲ್ಲಾ ತಪಾಸಣೆ ಬೂತ್ ಹಾಳು ಮಾಡಿ, ಜೈಲು ಸಿಬ್ವಂದಿಗಳಿಗೆ ಜೀವ ಬೆದರಿಕೆ ಹಾಕಿರುವ ಹಿನ್ನೆಲೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಗ್ಯ ತಪಾಸಣೆಗಾಗಿ ಹೊರಗಡೆ ಆಸ್ಪತ್ರೆಗೆ ತೆರಳಿದ್ದ ಜಬೀ ಕಾರಾಗೃಹಕ್ಕೆ ವಾಪಾಸ್ ಆದಾಗ ಮುಖ್ಯದ್ವಾರದಲ್ಲಿ ತಪಾಸಣೆಗೊಳಪಡುವಂತೆ ಅಲ್ಲಿನ ಸಿಬ್ಬಂದಿಗಳು ಸೂಚಿಸಿದ್ದಾರೆ. ಇವರೊಂದಿಗೆ ಅನುಚಿತವಾಗಿ ವರ್ತಿಸಿ ತಪಾಸಣೆಯ ಬೂತ್ ನ್ನ ಜಬೀ ಹಾಳು ಮಾಡಿದ್ದಾನೆ ಎನ್ನಲಾಗಿದೆ.
ಅಧಿಕಾರಿಗಳು ತಪಾಸಣೆಗೊಳಪಟ್ಟಾಗ ಇವರನ್ನೂ ನಿಂದಿಸಿ ಸಿಬ್ಬಂದಿಗಳಿಗೆ ಜೈಲಿನಿಂದ ಬಿಡುಗಡೆಯಾದ ಮೇಲೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ಜೈಲ್ ನ ಸೂಪರಿಂಟೆಂಡೆಂಟ್ ಡಾ. ಅನಿತಾ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Also read: ತೀರ್ಥಹಳ್ಳಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರ ಬರ್ಬರ ಹತ್ಯೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post