ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಲು ಮುಂದಾಗಿರುವ ಘಟನೆ ನಡೆದಿದೆ.
ಹರಮಘಟ್ಟದ ನಂದ್ಯಪ್ಪ ಸರ್ವೇ ನಂರ್ಬ 101 ನಲ್ಲಿರುವ ತಮ್ಮ ಒಂದು ಎಕರೆ ಜಮೀನನ್ನ ಆಶ್ರಮ ಮನೆಯ ಯೋಜನೆಗೆ 1992ರಲ್ಲಿ ಗ್ರಾಮಂಚಾಯಿತಿಗೆ ಬಿಟ್ಟುಕೊಟ್ಟಿದ್ದರು. ಆ ವೇಳೆ 22 ಲಕ್ಷ ಕೊಡಬೇಕೆಂದು ಮಾತುಕತೆಯಾದರೂ ಕೇವಲ 9 ಲಕ್ಷ ರೂ. ಬಂದಿತ್ತು. ಈ ಬಗ್ಗೆ ನಂದ್ಯಪ್ಪ ನ್ಯಾಯಾಲಯಕ್ಕೆ ಹೋಗಿದ್ದರು. ಐದು ವರ್ಷಗಳಿಂದ ರೀಜನಲ್ ಕೋರ್ಟ್ ಜಿಲ್ಲಾಧಿಕಾರಿಗಳು 95,8,283ರೂ. ಕೊಡಬೇಕು ಎಂದು ಆದೇಶಿಸಲಾಗಿತ್ತು. ಕಳೆದ ಐದು ವರ್ಷದಿಂದ ಹಣಕೊಡಲಿಲ್ಲ ಎಂದು ನಂದ್ಯಪ್ಪ ವಿಧಾನಸೌಧ, ಜಿಪಂ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ತಿರುಗಿದರೂ ಹಣ ಬಂದಿರಲಿಲ್ಲ. ಮತ್ತೆ ನಂದ್ಯಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನ್ಯಾಯಾಲಯಯ ಪರಿಹಾರ ನೀಡಲು ಮತ್ತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಲು ಬಂದಿದ್ದರು ಎನ್ನಲಾಗಿದೆ.

ಜಿಲ್ಲಾಧಿಕಾರಿಗಳ ಕಾರು ಜಪ್ತಿಗೆ ಕಾಲಾವಕಾಶ ದೊರೆತಿದೆ. ಮೂರುದಿನಗಳಲ್ಲಿ ರೈತ ನಂದ್ಯಪ್ಪ ಅವರ ಪರಿಹಾರ ನೀಡುವ ಭರವಸೆಯನ್ನ ಡಿಸಿ ನೀಡುವುದರ ಮೇರೆಗೆ ಕಾರಿನ ಜಪ್ತಿ ಕಾರ್ಯ ಮುಂದೂಡಲ್ಪಟ್ಟಿದೆ.
ಹರಮಘಟ್ಟದ ನಂದ್ಯಪ್ಪ ಸರ್ವೇ ನಂಬರ್ 101 ರಲ್ಲಿರುವ ತಮ್ಮ ಒಂದು ಎಕರೆ ಜಮೀನನ್ನ ಆಶ್ರಮ ಮನೆಯ ಯೋಜನೆಗೆ 1992 ರಲ್ಲಿ ಗ್ರಾಮಂಚಾಯಿತಿಗೆ ಬಿಟ್ಟುಕೊಟ್ಟಿದ್ದರು. ಆ ವೇಳೆ 22 ಲಕ್ಷ ಕೊಡಬೇಕೆಂದು ಮಾತುಕತೆಯಾದರೂ ಕೇವಲ 9 ಲಕ್ಷ ರೂ. ಬಂದಿತ್ತು. ಈ ಬಗ್ಗೆ ನಂದ್ಯಪ್ಪ ನ್ಯಾಯಾಲಯಕ್ಕೆ ಹೋಗಿದ್ದರು. ಐದು ವರ್ಷಗಳಿಂದ ರೀಜನಲ್ ಕೋರ್ಟ್ ಜಿಲ್ಲಾಧಿಕಾರಿಗಳು 95 ಲಕ್ಷ 88 ಸಾವಿರ 283 ರೂ. ಕೊಡಬೇಕು ಎಂದು ಆದೇಶಿಸಲಾಗಿತ್ತು.

ಅಮೀನಿನ ಮೇಲಾಧಿಕಾರಿಗಳ ಜೊತೆ ಡಿಸಿ ಮಾತನಾಡಿದ ಹಿನ್ನಲೆಯಲ್ಲಿ ಜಪ್ತಿಕಾರ್ಯ ಮುಂದೂಡಲ್ಪಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post