ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರ ಆಡಳಿತ ಅವಧಿಯಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರು ಬಡವರಿಗೆ ಹಾಗೂ ಶ್ರೀಸಾಮಾನ್ಯನ ಏಳಿಗೆಗಾಗಿ ಶ್ರಮಿಸಿದ್ದಾರೆ. ಹಲವು ಜನಪರ ಮಾನವೀಯ ಕಾರ್ಯಗಳನ್ನು ಪ್ರಧಾನಿಯವರು ನೀಡಿದ್ದಾರೆ ಇದನ್ನು ಪಕ್ಷದ ಕಾರ್ಯಕರ್ತರು, ಜನರಿಗೆ ತಲುಪಿಸಿ ಎಂದು ಸಂಸದ ಬಿ. ವೈ ರಾಘವೇಂದ್ರ MP Raghavendra ಕರೆ ನೀಡಿದರು.
ಶಿವಮೊಗ್ಗ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್, ಜಿಲ್ಲಾ ಪ್ರಭಾರಿಯಾದ ಮೋನಪ್ಪ ಬಂಡಾರಿ, ಸಹ ಪ್ರಭಾರಿ ಆರ್ ಡಿ ಹೆಗಡೆ, ಎನ್ ಎಸ್ ಹೆಗಡೆ, ಶಾಸಕ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಅರುಣ್ ಡಿ. ಎಸ್ ಹಾಗೂ ವಿವಿಧ ನಿಗಮ ಮಂಡಳಿಯ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.












Discussion about this post