ಪಾನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡಲು 1ಸಾವಿರ ರೂ. ದಂಡ ವಿಧಿಸುವ ಆದೇಶ ಹಿಂಪಡೆದು ಜನರಲ್ಲಿ ಜಾಗೃತಿ ಮೂಡಿಸಿ ಉಚಿತವಾಗಿ ಲಿಂಕ್ ಮಾಡಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಕಳೆದ 5 ವರ್ಷಗಳ ಹಿಂದೆ ಪಾನ್ ಕಾರ್ಢಿಗೆ ಆಧಾರ್ ಲಿಂಕ್ ಮಾಡಬೇಕೆನ್ನುವ ನಿಯಮ ಹೊರಡಿಸಿತ್ತು. ಸಾಮಾನ್ಯ ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆಯಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಪಾನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡಿಸಿಲ್ಲ. ಆದರೆ ಸರ್ಕಾರ ಜನರಲ್ಲಿ ಈ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಯಾವುದೇ ಕಾರ್ಯ ಮಾಡದೆ ವಿಳಂಬವಾಗಿ ಲಿಂಕ್ ಮಾಡಿಸುವವರಿಗೆ 1 ಸಾವಿರ ರೂ. ವಿಳಂಬ ಶುಲ್ಕ ಹೇರಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

Also read: ಚುರುಕುಗೊಂಡ ಮುಂಗಾರು: ರಾಜ್ಯದ ಹಲವೆಡೆ ಧಾರಾಕಾರ ಮಳೆ
ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ನಯನ, ಲಕ್ಷ್ಮಣ್, ಇನ್ನಿತರರು ಭಾಗವಹಿಸಿದ್ದರು.











Discussion about this post