ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ಯಾಂಕ್ ಉದ್ಯೋಗಿಗಳ #Bank Employees ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ, ಉದಾಸೀನತೆಯನ್ನು ತೋರಿಸುತ್ತಾ ಬಂದಿದೆ ಈ ನಿಟ್ಟಿನಲ್ಲಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯು ದೇಶಾದ್ಯಂತ ಮಾರ್ಚ್ 24 ಮತ್ತು 25ರಂದು ಮುಷ್ಕರ ನಡೆಸಲು ಕರೆ ನೀಡಿದೆ.
ಮುಷ್ಕರದ ಪೂರ್ವಭಾವಿಯಾಗಿ ಹಲವು ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ UFBU ಶಿವಮೊಗ್ಗ ಘಟಕವು BH ರಸ್ತೆಯಲ್ಲಿರುವ SBI ಶಾಖೆಯ ಮುಂದೆ ಪ್ರತಿಭಟನೆ ನಡೆಸಿದರು.
ಎಲ್ಲಾ ಬ್ಯಾಂಕ್ ಸಂಘಟನೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿ, ತಮ್ಮ ಬೇಡಿಕೆಗಳಾದ ಐದು ದಿನದ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಬ್ಯಾಂಕುಗಳಲ್ಲಿ ಖಾಲಿ ಇರುವ ಉದ್ಯೋಗವನ್ನು ಭರ್ತಿ ಮಾಡುವುದು, ತಾತ್ಕಾಲಿಕ ಸೇವೆಯಲ್ಲಿರುವನ್ನು ಕಾಯಂಗೊಳಿಸುವುದು, ಬ್ಯಾಂಕ್ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದು ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ರಕ್ಷಣೆ ನೀಡುವುದು, ಗ್ರಾಚುಟಿ ಹಣದ ಗರಿಷ್ಠ ಮೊತ್ತವನ್ನು 25 ಲಕ್ಷಕ್ಕೆ ಏರಿಸುವುದು ಇದರೊಂದಿಗೆ ಇನ್ನು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Also read: ಹೊಸ ಕೈಗಾರಿಕಾ ನೀತಿ | ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ಸಚಿವ ಪ್ರಿಯಾಂಕ್ ಖರ್ಗೆ
ಈ ಪ್ರತಿಭಟನೆಯಲ್ಲಿ ಕೆನರಾಬ್ಯಾಂಕ್ ಅಧಿಕಾರಿಗಳ ಸಂಘಟನೆಯ ನೆಲ್ಸನ್, ಹೊನ್ನಪ್ಪ, SBI ನ ಪುನೀತ್ ಕುಮಾರ್. ಪ್ರದೀಪ್, ಶಶಿಧರ್ ಕರ್ನಾಟಕ ಬ್ಯಾಂಕಿನ ವಿಶ್ವನಾಥ್ ಕೋಟಾಕ್ ಬ್ಯಾಂಕಿನ ನಿವೃತ್ತರಾದ ಶ್ರೀ ನಾಗರಾಜ್ ಹಾಗು ಹಲವು ಪದಾಧಿಕಾರಿಗಳು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ಮುಂದಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸುವಂತೆ ಸಂಚಾಲಕ ನೆಲ್ಸನ್ ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post