ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆರೋಗ್ಯ ಎನ್ನುವುದು ಎಷ್ಟು ಮುಖ್ಯ ಅನ್ನುವುದು ಇತ್ತೀಚೆಗೆ ನಮೆಗೆಲ್ಲಾ ತಿಳಿದೇ ಇದೆ. ನಾವು ಆರೋಗ್ಯವಾಗಿರಬೇಕಾದರೆ ವ್ಯಾಯಾಮ ಮತ್ತು ಯೋಗ ಅತೀ ಮುಖ್ಯವಾದುದು. ಹೌದು ಪ್ರತಿ ಮನುಷ್ಯನಿಗೂ ದೈಹಿಕ ವ್ಯಾಯಾಮ ತುಂಬಾನೆ ಮುಖ್ಯ. ನಾವೆಲ್ಲಾ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಯೋಗ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್. ದತ್ತಾತ್ರಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಎಲ್ಲರಿಗೂ ಪ್ರತಿನಿತ್ಯ ಯೋಗಾಸನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಮಯ ಹಾಗು ದೃಢ ಸಂಕಲ್ಪ. ನಾವು ನಮ್ಮ ಅರೋಗ್ಯಕ್ಕಾಗಿ ದಿನನಿತ್ಯ ಸ್ವಲ್ಪ ಸಮಯವನ್ನಾದರೂ ಮೀಸಲಿಡಬೇಕು ಹಾಗು ಅದರ ನಿರಂತರತೆಗೆ ದೃಢ ಸಂಕಲ್ಪ ಕೂಡ ಮಾಡಬೇಕು ಎಂದು ಹೇಳಿದ್ದಾರೆ.

ಯೋಗವು ನಮ್ಮ ಶ್ರೇಷ್ಠ ಸನಾತನ ಪರಂಪರೆ ಆಗಿದೆ. ಯೋಗಕ್ಕೆ ಯಾವುದೇ ವಿಶೇಷ ಪರಿಕರ ಹಾಗು ಸವಲತ್ತುಗಳ ಅವಶ್ಯಕತೆ ಇಲ್ಲ ಅತ್ಯಂತ ಕನಿಷ್ಠ ಸೌಲಭ್ಯಗಳಲ್ಲಿ ಕೇವಲ 6 – 3 ಅಡಿ ಜಾಗದಲ್ಲಿ ಮಾಡುವಂತಹ ಒಂದು ವಿಶೇಷವಾದಂತಹ ಯೋಗಾಸನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಿರಂತರ ಯೋಗ ಅಭ್ಯಾಸದಿಂದ ಅರೋಗ್ಯ ಮತ್ತು ಆಯಸ್ಸು ವೃದ್ಧಿಸುವುದಲ್ಲದೆ ನಾವು ಯಾವುದೇ ಆಸ್ಪತ್ರೆ ಹಾಗು ಔಷಧಿಯ ಗೋಜಿನಿಂದ ದೂರವಿರಬಹುದು. ಹೀಗೆ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 21 ರಂದು ಪ್ರಪಂಚದಾದ್ಯಂತ ವಾರ್ಷಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ದೃಢ ಸಂಕಲ್ಪದೊಂದಿಗೆ ನಿತ್ಯ ಅಭ್ಯಾಸ ಮಾಡುವುದರಿಂದ ಪಡೆಯಬಹುದಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ನಮ್ಮ ಯುವ ಪೀಳಿಗೆ ಅರಿತು ಯೋಗಾಭ್ಯಾಸ ಮೈಗೂಡಿಸಿ ಆರೋಗ್ಯವಂತರಬೇಕು ಪಾಶ್ಚಿಮಾತ್ಯ ಸಂಸ್ಕೃತಿಯ ಗೀಳನ್ನು ಕಡಿಮೆ ಮಾಡಿ. ನಮ್ಮ ರಾಷ್ಟ್ರೀಯತೆ, ಸಂಸ್ಕೃತಿ, ಆಚಾರ – ವಿಚಾರ ಪರಂಪರೆ ಹಾಗೂ ವಿಶ್ವಮಟ್ಟದಲ್ಲಿ ಶ್ರೇಷ್ಠತೆ ಪಡೆದ ನಮ್ಮ ಗೌರವ ಸಂಗೀತ ಪ್ರಕಾರಗಳಿಗೆ ಗಮನ ಹರಿಸಬೇಕು ಎಂಬುದೇ ನಮ್ಮ ಅಪೇಕ್ಷೆ ಎಂದು ತಿಳಿಸಿದ್ದಾರೆ.

ದೃಢ ಸಂಕಲ್ಪ ದೊಂದಿಗೆ ನಿತ್ಯ ಯೋಗ ಮಾಡೋಣ… ಆರೋಗ್ಯವಾಗಿರೋಣ… ಎಂದು ಹೇಳುತ್ತಾ ಎಸ್. ದತ್ತಾತ್ರಿ ಅಂತಾರಾಷ್ಟ್ರೀಯ ಯೋಗದಿನದ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















