ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇವರ ಸೇವೆ ಮಾಡುವುದು ನಮ್ಮ ಭಾಗ್ಯ ಎಂದು ತಿಳಿಯಿರಿ. ದೇವರಿಗೆ ನಾವು ಹೇಗೆ ಶರಣಾಗುತ್ತೇವೆಯೋ ಹಾಗೆ ನಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಶ್ರೀ ಸಂಸ್ಥಾನ ಕಾಶಿ ಮಠಾಧೀಶರಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ತಿಳಿಸಿದ್ದಾರೆ.
ನಗರದ ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರದ 12ನೆಯ ಪ್ರತಿಷ್ಠಾಪನಾ ವರ್ಧಂತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ತಮ್ಮ 4 ದಿನಗಳ ವಾಸ್ತವ್ಯದ ಸಂದರ್ಭದಲ್ಲಿ ಅವರು ಗುರುವಾರ ಆಶೀರ್ವಚನ ನೀಡಿದರು.

Also read: ಉದಯೋನ್ಮುಖ ಪ್ರತಿಭೆ ದೇವರಾತ ಜೋಶಿಗೆ ‘ಧ್ರುವ ಪ್ರಶಸ್ತಿ’ ಪ್ರದಾನ
ನಮ್ಮ ಮಾತೃಭಾಷೆ ಕೊಂಕಣಿ. ಮನೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಕೊಂಕಣಿ ಮಾತನಾಡಿ . ಮಾತೃ ಭಾಷೆಯನ್ನು ಮರೆತರೆ ಭಾಷೆ ನಶಿಸಿ ಹೋಗುತ್ತದೆ. ಮಾತೃ ಭಾಷೆ ಮರೆತರೆ ಬುದ್ಧಿ ಶಕ್ತಿ ಕಡಿಮೆ ಆಗುತ್ತದೆ. ಮಾತ್ರ ಭಾಷೆಗೆ ಆಚಾರ ಸಂಸ್ಕಾರ ವಿಚಾರ ಇದೆ. ಸಂಧ್ಯಾವಂದನೆ ಮಾಡಿ ಇದರಿಂದ ಸೂರ್ಯನ ಅನುಗ್ರಹ ಸಿಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಮಾತೃಭಾಷೆ ನಮ್ಮ ಸಂಸ್ಕಾರ ನಮ್ಮ ಸಂಸ್ಕøತಿ ನಮ್ಮ ಹಿರಿಯರು ಗುರುಗಳು ಮತ್ತು ದೇವರನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಭಾಸ್ಕರ್ ಜಿ ಕಾಮತ್. ಕಾರ್ಯದರ್ಶಿ ಸದಾನಂದ ನಾಯಕ್, ಮಾಜಿ ಅಧ್ಯಕ್ಷರಾದ ದೇವದಾಸ್ ನಾಯಕ್. ನರಸಿಂಹಮೂರ್ತಿ ಭಟ್ ಸೇರಿದಂತೆ ಸಮಾಜದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post