ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ಮಗುವಿನಲ್ಲೂ ಕಾಗದಗಳ ಉಳಿತಾಯದ ಪ್ರಮುಖ್ಯತೆ ಹಾಗೂ ಮಕ್ಕಳನ್ನು ಪರಿಸರ ಪ್ರೇಮಿಗಳಾಗಿ ಮಾಡುವುದೆ ಡಿಜಿಟಲ್ ವೋಟಿಂಗ್ ಮಾಡುವ ಮುಖ್ಯ ಉದ್ದೇಶ ಎಂದು ಪ್ರಾಂಶುಪಾಲರಾದ ಪ್ರಿಯದರ್ಶಿನಿ ತಿಳಿಸಿದರು.
ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕ, ನಾಯಕಿ, ಶಾಲಾ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ, ಕ್ರೀಡಾ ನಾಯಕ, ಉಪ ನಾಯಕ ಇಂಟರ್ ಹೌಸ್ ಗಳಾದ ಶಕ್ತಿ ಸಿದ್ದಾಂತ್ ನಿಶ್ಚಯ್ ವಿಶ್ವಾಸ್ ತಂಡದ ನಾಯಕ, ಉಪನಾಯಕರನ್ನು ಡಿಜಿಟಲ್ ವೋಟಿಂಗ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
Also read: ಮುಂದಿನ ದಿನಗಳಲ್ಲಿ ರೋಟರಿಯಿಂದ ಮತ್ತಷ್ಟು ಸಾಮಾಜಿಕ ಕಾರ್ಯ ಹೆಚ್ಚಾಗಬೇಕು: ರಾಜು ಸುಬ್ರಹ್ಮಣ್ಯಂ
ಈ ಮೂಲಕ ವಿದ್ಯಾರ್ಥಿಗಳಲ್ಲಿ ಚುನಾವಣೆಯ ಮಹತ್ವ, ನಾಯಕರಗುಣ, ಸ್ಪರ್ಧಾ ಮನೋಭಾವ , ಶಿಸ್ತು, ಹೊಣೆಗಾರಿಕೆ, ಜವಬ್ದಾರಿಗಳೇನು ಎಂಬುದನ್ನು ಮನವರಿಕೆ ಮೂಡಿಸಲು ಭವಿಷ್ಯದಲ್ಲಿ ಉತ್ತಮ ಪ್ರತಿನಿಧಿ ಆಯ್ಕೆ ಮಾಡಲು, ಉತ್ತಮ ಪ್ರಜೆಯಾಗಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಯೋಜಕರು ದಿವ್ಯಶೆಟ್ಟಿ, ಶಾಲೆಯ ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕರು ವಿಜಯ್ ಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಆಡಳಿತ ಮತ್ತು ಆಡಳಿಕೇತರ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post